ಚೀನಾ: ಹೊಸ ಕೊರೋನ ಅಲೆ ತಡೆಗೆ ಸಂಚಾರ ನಿರ್ಬಂಧ
ಬೀಜಿಂಗ್ (ಚೀನಾ), ಜ. 6: ಇನ್ನೊಂದು ಸುತ್ತಿನ ಕೊರೋನ ವೈರಸ್ ಅಲೆಯನ್ನು ನಿಭಾಯಿಸುವುದಕ್ಕಾಗಿ ಚೀನಾ ಬುಧವಾರ ಹೆಬೈ ಪ್ರಾಂತದ ರಾಜಧಾನಿ ಶಿಜಿಯಝುವಾಂಗ್ನಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಿದೆ ಹಾಗೂ ಜನರು ಒಟ್ಟು ಸೇರುವುದನ್ನು ನಿಷೇಧಿಸಿದೆ.
ಚೀನಾದಲ್ಲಿ ಜನವರಿ 5ರಂದು ಪತ್ತೆಯಾದ ಒಟ್ಟು 23 ಕೊರೋನ ವೈರಸ್ ಸೋಂಕು ಪ್ರಕರಣಗಳ ಪೈಕಿ 20 ಪ್ರಕರಣಗಳು ಹೆಬೈ ಪ್ರಾಂತವೊಂದರಲ್ಲೇ ವರದಿಯಾಗಿವೆ. ಅದೂ ಅಲ್ಲದೆ, ದೇಶದಲ್ಲಿ ಪತ್ತೆಯಾದ 64 ಹೊಸ ಲಕ್ಷಣರಹಿತ ಪ್ರಕರಣಗಳ ಪೈಕಿ 43 ಈ ಪ್ರಾಂತದಲ್ಲೇ ಪತ್ತೆಯಾಗಿವೆ.
Next Story