ಕೊನೆಗೂ ಸೋಲು ಒಪ್ಪಿಕೊಂಡ ಟ್ರಂಪ್
‘ಅಧಿಕಾರದ ಸುಗಮ ಹಸ್ತಾಂತರ’ದ ಭರವಸೆ
ವಾಶಿಂಗ್ಟನ್, ಜ. 7: ಜನವರಿ 20ರಂದು ನಾನಾಗಿಯೇ ಶ್ವೇತಭವನದಿಂದ ನಿರ್ಗಮಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ. ಇದರೊಂದಿಗೆ ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಸೋಲನ್ನು ಅವರು ಕೊನೆಗೂ ಒಪ್ಪಿಕೊಂಡಂತಾಗಿದೆ.
‘‘ಚುನಾವಣಾ ಫಲಿತಾಂಶಕ್ಕೆ ನನ್ನ ಸಮ್ಮತಿಯಿಲ್ಲವಾದರೂ, ಜನವರಿ 20ರಂದು ಅಧಿಕಾರ ಹಸ್ತಾಂತರ ಸುಗಮವಾಗಿ ನಡೆಯಲಿದೆ’’ ಎಂದು ಅವರು ಹೇಳಿದರು.
ಅಮೆರಿಕದ ಸಂಸತ್ತು ಜೋ ಬೈಡನ್ ವಿಜಯವನ್ನು ಪ್ರಮಾಣೀಕರಿಸಿದ ನಿಮಿಷಗಳ ಬಳಿಕ ನೀಡಿದ ಹೇಳಿಕೆಯೊಂದರಲ್ಲಿ ಅವರು ಹೀಗೆ ಹೇಳಿದ್ದಾರೆ.
‘‘ನನ್ನ ಅಧಿಕಾರಾವಧಿ ಅಮೆರಿಕದ ಅಧ್ಯಕ್ಷೀಯ ಇತಿಹಾಸದಲ್ಲೇ ಮೊದಲ ಅತ್ಯುತ್ತಮ ಅವಧಿಯಾಗಿದೆ. ಅದೀಗ ಕೊನೆಯಾಗುತ್ತದಾದರೂ, ಇದು ಅವೆುರಿಕವನ್ನು ಮತ್ತೆ ಶ್ರೇಷ್ಠ ದೇಶವನ್ನಾಗಿಸುವ ನಮ್ಮ ಹೋರಾಟದ ಆರಂಭವಾಗಿದೆ’’ ಎಂದು ಅವರು ಹೇಳಿಕೊಂಡಿದ್ದಾರೆ. ಈ ಮೂಲಕ 2024ರಲ್ಲಿ ಮತ್ತೆ ಚುನಾವಣೆ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
Next Story