ಅಮೆರಿಕ ಸಂಸತ್ ಮೇಲೆ ದಾಳಿ: 100ಕ್ಕೂ ಅಧಿಕ ಬಂಧನ ಎಫ್ಬಿಐ
ವಾಶಿಂಗ್ಟನ್, ಜ. 15: ಕಳೆದ ವಾರ ಅಮೆರಿಕ ಸಂಸತ್ನ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಗೆ ಸಂಬಂಧಿಸಿ 100ಕ್ಕೂ ಅಧಿಕ ಮಂದಿಯನ್ನು ಭದ್ರತಾ ಸಂಸ್ಥೆಗಳು ಬಂಧಿಸಿವೆ ಎಂದು ದೇಶದ ಉನ್ನತ ತನಿಖಾ ಸಂಸ್ಥೆ ಎಫ್ಬಿಐ ನಿರ್ದೇಶಕ ಕ್ರಿಸ್ಟೋಫರ್ ರೇ ಹೇಳಿದ್ದಾರೆ.
ಅದೇ ವೇಳೆ, ಜನವರಿ 20ರಂದು ನಡೆಯಲಿರುವ ನಿಯೋಜಿತ ಅಧ್ಯಕ್ಷ ಜೋ ಬೈಡನ್ರ ಪ್ರಮಾಣವಚನ ಕಾರ್ಯಕ್ರಮಕ್ಕೆ ಮುನ್ನ ಇಂಟರ್ನೆಟ್ನಲ್ಲಿ ನಡೆಯುತ್ತಿರುವ ‘ಅಗಾಧ ಪ್ರಮಾಣದ ಕಳವಳಕಾರಿ ಸಂಭಾಷಣೆ’ಯ ಮೇಲೆಯೂ ಎಫ್ಬಿಐ ನಿಗಾ ಇಟ್ಟಿದೆ ಎಂದು ಅವರು ತಿಳಿಸಿದರು.
ಜನವರಿ 6ರಂದು ನಡೆದ ಹಿಂಸಾಚಾರವನ್ನು ಪುನರಾವರ್ತಿಸಲು ಯತ್ನಿಸಬಹುದಾದ ವ್ಯಕ್ತಿಗಳ ಮೇಲೆಯೂ ನಾವು ನಿಗಾ ಇಟ್ಟಿದ್ದೇವೆ ಎಂದು ಅವರು ನುಡಿದರು.
Next Story