ವಿಶ್ವ ಆರೋಗ್ಯ ಸಂಸ್ಥೆಗೆ 1,450 ಕೋಟಿ ರೂ. ದೇಣಿಗೆ: ಅಮೆರಿಕ ಘೋಷಣೆ
ವಿಶ್ವಸಂಸ್ಥೆ (ನ್ಯೂಯಾರ್ಕ್), ಫೆ. 18: ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಗೆ ಈ ತಿಂಗಳ ಕೊನೆಯ ಮುನ್ನ 200 ಮಿಲಿಯ ಡಾಲರ್ (ಸುಮಾರು 1,450 ಕೋಟಿ ರೂಪಾಯಿ)ಗೂ ಅಧಿಕ ಹಣ ಪಾವತಿಸಲಿದೆ ಎಂದು ವಿದೇಶ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಬುಧವಾರ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವ ಹಿಂದಿನ ಡೊನಾಲ್ಡ್ ಟ್ರಂಪ್ ಸರಕಾರದ ನಿರ್ಧಾರವನ್ನು ನೂತನ ಬೈಡನ್ ಆಡಳಿತ ವಾಪಸ್ ಪಡೆದ ಬಳಿಕ ಈ ಬೆಳವ ಣಿಗೆ ನಡೆದಿದೆ.
‘‘ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ದೇಶವಾಗಿ ನಮ್ಮ ಹಣಕಾಸು ಬದ್ಧತೆಗಳನ್ನು ಪೂರೈಸುವತ್ತ ಇಟ್ಟ ಪ್ರಮುಖ ಹೆಜ್ಜೆಯಾಗಿದೆ. ಕೊರೋನ ವೈರಸ್ಗೆ ನೀಡುವ ಜಾಗತಿಕ ಪ್ರತಿಕ್ರಿಯೆಯ ನೇತೃತ್ವ ವಹಿಸಲು ವಿಶ್ವ ಆರೋಗ್ಯ ಸಂಸ್ಥೆಗೆ ಅಗತ್ಯವಾದ ನೆರವನ್ನು ನೀಡುವ ನಮ್ಮ ಬದ್ಧತೆಯನ್ನು ನಾವು ಈಡೇರಿಸುತ್ತಿದ್ದೇವೆ’’ ಎಂದು ಕೋವಿಡ್-19 ಕುರಿತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಆನ್ಲೈನ್ ಸಮಾವೇಶದಲ್ಲಿ ಭಾಗವಹಿಸಿದ ಅವರು ಹೇಳಿದರು.
Next Story