ಮಲೇಶ್ಯ: 1,086 ಮ್ಯಾನ್ಮಾರ್ ನಾಗರಿಕರ ಗಡಿಪಾರು
ಫೋಟೊ ಕೃಪೆ: twitter.com/ajplus
ಕೌಲಾಲಂಪುರ (ಮಲೇಶ್ಯ), ಫೆ. 23: ಮಲೇಶ್ಯ 1,086 ಮ್ಯಾನ್ಮಾರ್ ರಾಷ್ಟ್ರೀಯರನ್ನು ಗಡಿಪಾರು ಮಾಡಿದೆ. ಸೇನಾಡಳಿತದ ಮ್ಯಾನ್ಮಾರ್ಗೆ ಮರಳಿದರೆ ಅವರು ಸಮಸ್ಯೆಗೆ ಸಿಲುಕಬಹುದು ಎಂಬ ಕಳವಳದ ಹಿನ್ನೆಲೆಯಲ್ಲಿ, ಅವರ ಗಡಿಪಾರನ್ನು ತಾತ್ಕಾಲಿಕವಾಗಿ ತಡೆಯುವಂತೆ ನ್ಯಾಯಾಲಯ ಆದೇಶ ನೀಡಿರುವ ಹೊರತಾಗಿಯೂ ಗಡಿಪಾರು ಮಾಡಲಾಗಿದೆ.
ಗಡಿಪಾರಿಗೊಳಗಾದ ಎಲ್ಲರೂ ಕಳೆದ ವರ್ಷ ಬಂಧಿತರಾಗಿದ್ದ ಮ್ಯಾನ್ಮಾರ್ ನಾಗರಿಕರಾಗಿದ್ದಾರೆ ಹಾಗೂ ಅವರಲ್ಲಿ ರೊಹಿಂಗ್ಯಾ ಮುಸ್ಲಿಮ್ ಸಮುದಾಯಕ್ಕೆ ಸೇರಿದ ನಿರಾಶ್ರಿತರಾಗಲಿ, ಆಶ್ರಯ ಕೋರಿಕೆದವರಾಗಲಿ ಇಲ್ಲ ಎಂದು ಮಲೇಶ್ಯ ವಲಸೆ ಇಲಾಖೆಯ ಮಹಾನಿರ್ದೇಶಕ ಕೈರುಲ್ ದೌಡ್ ತಿಳಿಸಿದರು.
Next Story