ಇಕ್ವೆಡಾರ್ ಜೈಲುಗಳಲ್ಲಿ ಹೊಡೆದಾಟ: 62 ಸಾವು
ಸಾಂದರ್ಭಿಕ ಚಿತ್ರ
ಗ್ವಾಯಕ್ವಿಲ್ (ಇಕ್ವೆಡಾರ್), ಫೆ. 24: ಇಕ್ವೆಡಾರ್ನ ಮೂರು ಜೈಲುಗಳಲ್ಲಿ ಮಂಗಳವಾರ ನಡೆದ ಕಾಳಗದಲ್ಲಿ ಕನಿಷ್ಠ 62 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಕ್ರಿಮಿನಲ್ ಗ್ಯಾಂಗ್ಗಳ ನಡುವಿನ ವೈರತ್ವವೇ ಕಾಳಗಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಭದ್ರತಾ ಪಡೆಗಳು ಪ್ರಯತ್ನಿಸುತ್ತಿರುವಂತೆಯೇ, ಕೈದಿಗಳ ಸಂಬಂಧಿಕರು ತಮ್ಮವರ ಕುರಿತ ಸುದ್ದಿ ಕೇಳಲು ಜೈಲಿನ ಹೊರಗಡೆ ಆತಂಕದಿಂದ ಕಾಯುತ್ತಿದ್ದರು.
ಪಶ್ಚಿಮದ ಬಂದರು ನಗರ ಗ್ವಾಯಕ್ವಿಲ್, ಸ್ವೆಂಕ ಮತ್ತು ಲಟಕುಂಗ ನಗರಗಳಲ್ಲಿರುವ ಜೈಲುಗಳಲ್ಲಿ ಹೊಡೆದಾಟ ನಡೆದಿದೆ.
Next Story