ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ನೊಂದಿಗೆ ವಿವಾಹವಾಗಲಿರುವ ಶಾಹಿದ್ ಅಫ್ರಿದಿ ಪುತ್ರಿ
photo: twitter
ಲಾಹೋರ್: ಪಾಕಿಸ್ತಾನದ ಮಾಜಿ ಆಲ್ ರೌಂಡರ್ ಶಾಹಿದ್ ಅಫ್ರಿದಿಯವರ ಹಿರಿಯ ಪುತ್ರಿ ಅಖ್ಸಾ ಅವರು ಪಾಕ್ ಕ್ರಿಕೆಟ್ ತಂಡದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪಾಕಿಸ್ತಾನ ಮಾಧ್ಯಮಗಳಿಗೆ ಈ ವಿಚಾರವನ್ನು ದೃಢಪಡಿಸಿರುವ ಶಾಹೀನ್ ಅಫ್ರಿದಿಯ ತಂದೆ ಆಯಾಝ್ ಖಾನ್, ಎರಡೂ ಕುಟುಂಬಗಳು ಪರಸ್ಪರ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದರಿಂದ ಕುಟುಂಬವು ಈ ಪ್ರಸ್ತಾವವನ್ನು ಒಪ್ಪಿಕೊಂಡಿದೆ. ನಿಶ್ಚಿತಾರ್ಥ ಶೀಘ್ರವೇ ನಡೆಯಲಿದೆ ಎಂದು ಹೇಳಿದ್ದಾರೆ.
ಈ ಕುರಿತಾದಂತೆ ಶಾಹಿದ್ ಅಫ್ರಿದಿ ಟ್ವೀಟ್ ಮಾಡಿದ್ದು, "ಶಾಹೀನ್ ಕುಟುಂಬವು ನನ್ನ ಮಗಳಿಗಾಗಿ ನಮ್ಮೊಂದಿಗೆ ಮಾತುಕತೆ ನಡೆಸಿದೆ. ನಮ್ಮ ಕುಟುಂಬಗಳೆರಡೂ ಪರಸ್ಪರ ಸಂಬಂಧದಲ್ಲಿದ್ದೇವೆ. ಜೋಡಿಗಳನ್ನು ಸ್ವರ್ಗದಲ್ಲಿ ನಿಶ್ಚಯಿಸಲಾಗುತ್ತದೆ. ಅಲ್ಲಾಹು ಇಚ್ಛಿಸಿದರೆ ಈ ಜೋಡಿಗಳೂ ಪರಸ್ಪರ ಒಂದಾಗಲಿದೆ. ಶಾಹೀನ್ ಮೈದಾನದಲ್ಲೂ, ಫೀಲ್ಡ್ ನ ಆಚೆಗೂ ತನ್ನ ಯಶಸ್ಸನ್ನು ಮುಂದುವರಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ.
ಶಾಹೀನ್ ಅಫ್ರಿದಿ ಹಾಗೂ ಶಾಹಿದ್ ಅಫ್ರಿದಿ ಇಬ್ಬರೂ ಕೂಡ ಇತ್ತೀಚೆಗೆ ಪಾಕಿಸ್ತಾನ ಸೂಪರ್ ಲೀಗ್-2021ರಲ್ಲಿ ಒಟ್ಟಿಗೆ ಆಡಿದ್ದರು. ಶಾಹೀನ್ ಲಾಹೋರ್ ತಂಡದ ಪರ 4 ಪಂದ್ಯಗಳಲ್ಲಿ 9 ವಿಕೆಟ್ ಗಳನ್ನು ಪಡೆದಿದ್ದರೆ, ಶಾಹಿದ್ ಅಫ್ರಿದಿ ಮುಲ್ತಾನ್ ಸುಲ್ತಾನ್ ಪರ 5 ವಿಕೆಟ್ ಗಳನ್ನು ಪಡೆದಿದ್ದರು.
20ರ ಹರೆಯದ ಶಾಹೀನ್ ಅಫ್ರಿದಿ 2018ರಲ್ಲಿ ಪಾಕಿಸ್ತಾನದ ಪರ ಚೊಚ್ಚಲ ಪಂದ್ಯವನ್ನಾಡಿದ ಬಳಿಕ 15 ಟೆಸ್ಟ್, 22 ಏಕದಿನ ಹಾಗೂ 21 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ 48 ವಿಕೆಟ್ ಗಳನ್ನು ಪಡೆದಿರುವ ಶಾಹೀನ್ ಅವರು 50 ಓವರ್ ಗಳು ಹಾಗೂ 20 ಓವರ್ ಗಳ ಪಂದ್ಯದಲ್ಲಿ ಕ್ರಮವಾಗಿ 45 ಹಾಗೂ 24 ವಿಕೆಟ್ ಗಳನ್ನು ಕಬಳಿಸಿದ್ದರು.
Shaheen's family approached my family for my daughter. Both families are in touch, matches are made in heaven, if Allah wills this match will be made too. My prayers are with Shaheen for his continued success on and off the field.
— Shahid Afridi (@SAfridiOfficial) March 7, 2021
This is why Shaheen didn't want to celebrate Afridi's wicket
— Kifayat Ali (@KiffayatAli) March 7, 2021
Well congrats.pic.twitter.com/7SWJAGC1Do