ಮ್ಯಾನ್ಮಾರ್: ಪೊಲೀಸರ ಗುಂಡಿಗೆ 3 ಪ್ರತಿಭಟನಾಕಾರರು ಬಲಿ
ಯಾಂಗನ್ (ಮ್ಯಾನ್ಮಾರ್), ಮಾ. 8: ಮ್ಯಾನ್ಮಾರ್ನಲ್ಲಿ ಸೇನಾಡಳಿತವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಸೋಮವಾರವೂ ಮುಂದುವರಿದಿದ್ದು, ಪೊಲೀಸರು ಹಾರಿಸಿದ ಗುಂಡಿಗೆ ಮೂವರು ಬಲಿಯಾಗಿದ್ದಾರೆ.
ಈವರೆಗೆ ಪ್ರತಿಭಟನಕಾರರ ಮೇಲೆ ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ 50ಕ್ಕೂ ಅಧಿಕ ಮಂದಿ ಬಲಯಾಗಿದ್ದಾರೆ. ಪೊಲೀಸರು 1,800ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
Next Story