ಇಸ್ರೇಲ್ ಪ್ರಧಾನಿ ನೆತನ್ಯಾಹುರ ಯುಎಇ ಭೇಟಿ ರದ್ದು
ಟೆಲ್ ಅವೀವ್ (ಇಸ್ರೇಲ್), ಮಾ. 11: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ನೀಡಬೇಕಾಗಿದ್ದ ಭೇಟಿಯನ್ನು ರದ್ದುಗೊಳಿಸಲಾಗಿದೆ ಎಂದು ಇಸ್ರೇಲ್ನ ಸರಕಾರಿ ರೇಡಿಯೊ ‘ಕಾನ್’ ವರದಿ ಮಾಡಿದೆ.
ನೆತನ್ಯಾಹು ಯುಎಇಗೆ ಭೇಟಿ ನೀಡಲಿದ್ದರು ಅಥವಾ ಆ ಭೇಟಿಯನ್ನು ಮರುಪರಿಶೀಲಿಸಲಾಗಿದೆ ಎನ್ನುವುದನ್ನು ಇಸ್ರೇಲ್ ಆಗಲಿ ಯುಎಇ ಆಗಲಿ ದೃಢೀಕರಿಸಿಲ್ಲ. ನೆತನ್ಯಾಹು ಯುಎಇಗೆ ಭೇಟಿ ನೀಡಿದ್ದರೆ, ಇಸ್ರೇಲ್ ಪ್ರಧಾನಿಯೊಬ್ಬರು ಯುಎಇಗೆ ನೀಡಿದ ಮೊದಲ ಭೇಟಿ ಆಗಿರುತ್ತಿತ್ತು.
ಈ ಪ್ರವಾಸದ ಬಗ್ಗೆ ಇಸ್ರೇಲ್ ಮಾಧ್ಯಮ ಬುಧವಾರ ವರದಿ ಮಾಡಿತ್ತು. ನೆತನ್ಯಾಹು ಅಬುಧಾಬಿಯ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ರನ್ನು ಭೇಟಿ ಮಾಡಲಿದ್ದಾರೆ ಎಂದು ಅದು ಹೇಳಿತ್ತು.
Next Story