ರಶ್ಯ ಅಧ್ಯಕ್ಷ ಪುಟಿನ್ ಓರ್ವ ಕೊಲೆಗಾರ: ಬೈಡನ್
ವಾಶಿಂಗ್ಟನ್, ಮಾ. 17: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಓರ್ವ ‘ಕೊಲೆಗಾರ’ ಎಂಬ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ ಎಂದು ಅವೆುರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
‘ಎಬಿಸಿ ನ್ಯೂಸ್’ಗೆ ಬುಧವಾರ ನೀಡಿದ ಸಂದರ್ಶನವೊಂದರಲ್ಲಿ ಅವರು ಮಾತನಾಡುತ್ತಿದ್ದರು.
ತನ್ನ ಎದುರಾಳಿಗಳೊಂದಿಗೆ ನಿರ್ದಯೆಯಿಂದ ವರ್ತಿಸುತ್ತಾರೆ ಎಂಬ ಆರೋಪವನ್ನು ಎದುರಿಸುತ್ತಿರುವ ಪುಟಿನ್ ಓರ್ವ ‘ಕೊಲೆಗಾರ’ ಎಂಬುದಾಗಿ ನೀವು ಭಾವಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಬೈಡನ್, ‘‘ಹೌದು’’ ಎಂದು ಹೇಳಿದರು.
ಅಮೆರಿಕದ ಅಧ್ಯಕ್ಷನಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜನವರಿಯಲ್ಲಿ ನಾನು ಪುಟಿನ್ ಜೊತೆಗೆ ಮಾತನಾಡಿದ್ದೇನೆ ಎಂದು ಬೈಡನ್ ನುಡಿದರು. ‘‘ನಾನು ಅವರನ್ನು ಚೆನ್ನಾಗಿ ಬಲ್ಲೆ’’ ಎಂದರು.
Next Story