ಆಸ್ಟ್ರೇಲಿಯದಲ್ಲಿ ಭಾರೀ ಮಳೆ, ಪ್ರವಾಹ: ಭಾರೀ ಸಂಖ್ಯೆಯಲ್ಲಿ ಜನರ ಸ್ಥಳಾಂತರ
ಸಾಂದರ್ಭಿಕ ಚಿತ್ರ
ಸಿಡ್ನಿ (ಆಸ್ಟ್ರೇಲಿಯ), ಮಾ. 20: ಆಸ್ಟ್ರೇಲಿಯದ ಪೂರ್ವ ಕರಾವಳಿಯಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು, ಭೀಕರ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಶನಿವಾರ ಭಾರೀ ಸಂಖ್ಯೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸೌತ್ವೇಲ್ಸ್ ರಾಜ್ಯದ ಸಿಡ್ನಿ ನಗರದ ಉತ್ತರ ಭಾಗದಲ್ಲಿ ನಿರ್ವಸಿತರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು ಜನರು ನೂರಾರು ಸಂಖ್ಯೆಯಲ್ಲಿ ಅಲ್ಲಿಗೆ ತೆರಳುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮಳೆ ಈಗ ಕರಾವಳಿಯ ದಕ್ಷಿಣದ ಭಾಗಗಳಿಗೂ ವಿಸ್ತರಿಸಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಿರ್ವಸಿತ ಕೇಂದ್ರಗಳಿಗೆ ಬರುವ ನಿರೀಕ್ಷೆಯನ್ನು ಅಧಿಕಾರಿಗಳು ಹೊಂದಿದ್ದಾರೆ.
Next Story