ಮ್ಯಾನ್ಮಾರ್: ಸೈನಿಕರ ವಿರುದ್ಧ ಬಂದೂಕುಗಳೊಂದಿಗೆ ಹೋರಾಡಿದ ಪ್ರತಿಭಟನಾಕಾರರು; ಕನಿಷ್ಠ 11 ಮಂದಿ ಸಾವು
ಯಾಂಗನ್ (ಮ್ಯಾನ್ಮಾರ್), ಎ. 8: ಮ್ಯಾನ್ಮಾರ್ನ ಟಝೆ ಎಂಬ ಪಟ್ಟಣದಲ್ಲಿ, ಬುಧವಾರ ಸೇನಾ ಕ್ಷಿಪ್ರಕ್ರಾಂತಿಯನ್ನು ವಿರೋಧಿಸುತ್ತಿರುವ ಜನರು ಬೇಟೆಯಾಡುವ ಬಂದೂಕುಗಳು ಮತ್ತು ಬೆಂಕಿಬಾಂಬ್ಗಳೊಂದಿಗೆ ಸೈನಿಕರ ವಿರುದ್ಧ ಹೋರಾಟ ನಡೆಸಿದ್ದು ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬೃಹತ್ ಪ್ರತಿಭಟನೆಯನ್ನು ನಿಗ್ರಹಿಸಲು ಆರು ಟ್ರಕ್ ಸೈನಿಕರನ್ನು ಪಟ್ಟಣದಲ್ಲಿ ನಿಯೋಜಿಸಲಾಗಿತ್ತು ಎಂದು ಮಾಧ್ಯಮಗಳು ಗುರುವಾರ ವರದಿ ಮಾಡಿವೆ.
ಸೈನಿಕರು ದಮನ ಕಾರ್ಯಾಚರಣೆ ನಡೆಸಿದಾಗ, ಪ್ರತಿಭಟನಕಾರರು ಬಂದೂಕುಗಳು, ಚೂರಿಗಳು ಮತ್ತು ಬೆಂಕಿಬಾಂಬ್ಗಳ ಮೂಲಕ ತಿರುಗಿಬಿದ್ದರು. ಆಗ ಇನ್ನೂ 5 ಟ್ರಕ್ ಸೈನಿಕರನ್ನು ಅಲ್ಲಿಗೆ ಕರೆಸಲಾಯಿತು.
ಯುದ್ಧವು ಗುರುವಾರ ಮುಂಜಾನೆಯವರೆಗೂ ಮುಂದುವರಿಯಿತು. ಕನಿಷ್ಠ 11 ಪ್ರತಿಭಟನಕಾರರು ಮೃತಪಟ್ಟರು ಹಾಗೂ ಸುಮಾರು 20 ಮಂದಿ ಗಾಯಗೊಂಡರು ಎಂದು ಮಾಧ್ಯಮಗಳು ಹೇಳಿವೆ.
Next Story