ಜನ ಬೀದಿಗಳಲ್ಲಿ ನರಳಾಡಿ ಪ್ರಾಣ ಬಿಡುತ್ತಿದ್ದಾರೆ, ರಾಜ್ಯ ಸ್ಮಶಾನವಾಗಿದೆ: ಸರಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ | Vartha Bharati- ವಾರ್ತಾ ಭಾರತಿ

--

ಜನ ಬೀದಿಗಳಲ್ಲಿ ನರಳಾಡಿ ಪ್ರಾಣ ಬಿಡುತ್ತಿದ್ದಾರೆ, ರಾಜ್ಯ ಸ್ಮಶಾನವಾಗಿದೆ: ಸರಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು, ಎ.17: ಪ್ರಧಾನಿ ನರೇಂದ್ರ ಮೋದಿಯ ಪ್ರಚಾರದ ತೆವಲಿಗೆ ಭಾರತೀಯರ ಹಿತ ಬಲಿಯಾಗುತ್ತಿರುವುದು ಇದೇ ಮೊದಲಲ್ಲ. ಉತ್ಪಾದಿಸಿದ ಲಸಿಕೆಗಳನ್ನು ವಿದೇಶಗಳಿಗೆ ಹಂಚಿದ್ದಾರೆ, ಪರಿಣಾಮ ದೇಶಾದ್ಯಂತ ಲಸಿಕೆ ಕೊರತೆ ಎದುರಾಗಿದೆ. ಇಷ್ಟಾದರೂ ರಫ್ತು ನಿಷೇಧ ಹೇರಲಿಲ್ಲ. ದೇಶಕ್ಕೆಸಗಿದ ಇಂತಹ ದ್ರೋಹವನ್ನು ರಾಜ್ಯ ಬಿಜೆಪಿ ಲಜ್ಜೆ ಬಿಟ್ಟು ಸುಳ್ಳುಗಳ ಮೂಲಕ ಸಮರ್ಥನೆಗೆ ಇಳಿದಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಸಂಬಂಧ ಸರಣಿ ಟ್ವಿಟ್‍ಗಳನ್ನು ಮಾಡಿರುವ ಕಾಂಗ್ರೆಸ್, ಕೊರೋನ ತಗಲದಂತೆ ತಡೆಯಲಾಗದಿದ್ದರೂ, ರೋಗ ನಿರೋಧಕ ಶಕ್ತಿ ವೃದ್ಧಿಗೊಳಿಸಿ ಸೋಂಕಿನ ಪ್ರಭಾವ, ಸಾವಿನ ಪ್ರಮಾಣ ಕಡಿಮೆಗೊಳಿಸಲು ಲಸಿಕೆ ಸಹಕಾರಿ. ಸಾವಿನ ಪ್ರಮಾಣ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಲಸಿಕೆಗಳು ಪ್ರತಿಯೊಬ್ಬರಿಗೂ ಅತ್ಯಗತ್ಯ. ರಾಜ್ಯದಲ್ಲಿ ಲಸಿಕೆಯ ಕೊರತೆಯಿದ್ದರೂ ರಾಜ್ಯ ಬಿಜೆಪಿ ಅಂಕಿ ಅಂಶಗಳಿಲ್ಲದ ಸುಳ್ಳಿನಿಂದ ಸಮರ್ಥನೆಗಿಳಿದಿದೆ ಎಂದು ದೂರಿದೆ.

ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಲು ಹೊರಟಂತಿದೆ ಸರಕಾರದ ಸ್ಥಿತಿ. ಕೊರೋನ ಬಂದು ವರ್ಷ ಕಳೆದಿದೆ, ಇಷ್ಟು ದಿನದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿ, ಮಲಗಿದ್ದ ರಾಜ್ಯ ಬಿಜೆಪಿ ಸರಕಾರಕ್ಕೆ ಸ್ಪಷ್ಟತೆ, ಪ್ರಬುದ್ಧತೆ ಇಲ್ಲದೆ ಈಗ ತುರ್ತು ಸಭೆಯಂತೆ, ಆ ಸಭೆಯಂತೆ, ಈ ಸಭೆಯಂತೆ. ತಜ್ಞರ ಕೊರತೆ ಇರುವ ಈ ಸರಕಾರದಿಂದ ನಿಯಂತ್ರಣ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.

ಬಿಜೆಪಿಗೆ ಸುಳ್ಳೇ ತಂದೆ, ಸುಳ್ಳೇ ತಾಯಿ. ರಾಜ್ಯಾದ್ಯಂತ ಬೆಡ್‍ಗಳು, ರೆಮಿಡಿಸಿವಿರ್, ಐಸಿಯು, ಲಸಿಕೆ, ಆಸ್ಪತ್ರೆ, ಆಕ್ಸಿಜನ್ ಎಲ್ಲದರ ಕೊರತೆಯಿಂದ ಹಾಹಾಕಾರವೆದ್ದಿದೆ. ಜನ ಬೀದಿ ಬೀದಿಗಳಲ್ಲಿ ನರಳಾಡಿ ಪ್ರಾಣ ಬಿಡುತ್ತಿದ್ದಾರೆ. ರಾಜ್ಯ ಬಿಜೆಪಿ, ಮಾನ ಮುಚ್ಚಿಕೊಳ್ಳುವ ನಿಮ್ಮ ಸುಳ್ಳು ಜನರ ಪ್ರಾಣ ಉಳಿಸದು. ನಿಮ್ಮಿಂದ ರಾಜ್ಯ ಸ್ಮಶಾನವಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಆರೋಗ್ಯ ಸಚಿವ ಸುಧಾಕರ್ ಅವರೇ, ಇದು ಸುಳ್ಳು ಹೇಳುತ್ತಾ ಆತ್ಮವಂಚನೆ ಮಾಡಿಕೊಂಡು ಕೂರುವ ಕಾಲವಲ್ಲ. ವಾಸ್ತವದ ಸತ್ಯ ಒಪ್ಪಿಕೊಂಡು ಗಂಭೀರವಾಗಿ ಚಿಂತಿಸಿ ಅಗತ್ಯ ಕ್ರಮ ಕೈಗೊಳ್ಳುವ ತುರ್ತು ಸಮಯ. ಜನ ನರಳಿ ನರಳಿ ಸಾಯುತ್ತಿದ್ದಾರೆ, ರಾಜ್ಯ ಬಿಜೆಪಿ ನಿಮ್ಮ ಹೊಲಸು ಸುಳ್ಳುಗಳನ್ನು ಸ್ವಲ್ಪ ಸಮಯದವರೇಗಾದರೂ ಮುಂದೂಡಿ. ಆಗಬೇಕಾದ ಕೆಲಸಗಳನ್ನು ಗಮನಿಸಿ ಎಂದು ಕಾಂಗ್ರೆಸ್ ಹೇಳಿದೆ.

ರಾಜ್ಯದಲ್ಲಿ ಪರಿಸ್ಥಿತಿ ತೀರಾ ಹದಗೆಡುತ್ತಿದೆ. ಆಕ್ಸಿಜನ್ ಸೇರಿದಂತೆ ಎಲ್ಲ ವೈದ್ಯಕೀಯ ವ್ಯವಸ್ಥೆಗಳ ಕೊರತೆಯಿಂದ ಸ್ಥಿತಿ ಬಿಗಡಾಯಿಸುತ್ತಿದೆ. ವಾಸ್ತವದ ಅರಿವಿಲ್ಲದ ರಾಜ್ಯ ಬಿಜೆಪಿ ಸರಕಾರ ಎಚ್ಚರಿಕೆಯ ಮಾತುಗಳನ್ನು ಸುಳ್ಳು ಎಂದು ಬಿಂಬಿಸಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಯತ್ನಿಸುತ್ತಿದೆಯೇ ಹೊರತು ಅಗತ್ಯ ಕ್ರಮಗಳ ಬಗ್ಗೆ ಚಿಂತಿಸುತ್ತಿಲ್ಲ ಎಂದು ಕಾಂಗ್ರೆಸ್ ದೂರಿದೆ.

ಪಾಸಿಟಿವ್ ವರದಿ ಇದ್ದರೂ ನಾನು ಕುಂಭಮೇಳದಲ್ಲಿ ಭಾಗವಹಿಸಿದ್ದೇನೆ ಎಂದು ಉತ್ತರಪ್ರದೇಶ ಶಾಸಕರೊಬ್ಬರು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿರುವ ಕಾಂಗ್ರೆಸ್, ಕೊರೋನ 2ನೇ ಅಲೆಗೆ, ದೇಶದ ಅಧೋಗತಿಗೆ, ಜನರ ಸಾವಿಗೆ ದೇಶದ್ರೋಹಿ ಬಿಜೆಪಿಯೇ ಕಾರಣ ಎನ್ನುವುದು ಇದರಿಂದ ಸ್ಪಷ್ಟ. ನಿಮ್ಮ ಶಾಸಕರೇ ನಿಯಮ ಮುರಿದು ಬಂಡತನದಲ್ಲಿ ಮಾತನಾಡುತ್ತಿರುವಾಗ ಜನರಿಗೆ ನಿಯಮ ಪಾಲಿಸುವ ಪಾಠ ಹೇಳುವುದು ಯಾವ ನೈತಿಕತೆ ಎಂದು ಪ್ರಶ್ನಿಸಿದೆ.

ರಾಜ್ಯದಲ್ಲಿ ಲಸಿಕೆ ಕೊರತೆ, ಆಕ್ಸಿಜನ್ ಕೊರತೆ, ಬೆಡ್‍ಗಳ ಕೊರತೆ ಸೇರಿದಂತೆ ಎಲ್ಲ ವೈದ್ಯಕೀಯ ವ್ಯವಸ್ಥೆಗಳ ಕೊರತೆಯಿಂದ ಜನ ನರಳುತ್ತಿದ್ದಾರೆ. ಸಚಿವ ಸುಧಾಕರ್ ಅವರೇ, ಏಕೆ ಈ ಬೇಜಾಬ್ದಾರಿತನ? ಪಿಎಂ ಕೇರ್ಸ್ ನಿಧಿಯಿಂದ ನೆರವು ಕೇಳಲು ಏಕೆ ಹಿಂಜರಿಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಖಾಸಗಿ ಆಸ್ಪತ್ರೆಗೆ ಸಿಎಂ ದಾಖಲು: ಕಾಂಗ್ರೆಸ್ ಕಿಡಿ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊರೋನ ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗೆ ಸೇರದೆ ಖಾಸಗಿ ಆಸ್ಪತ್ರೆ ಸೇರುವ ಮೂಲಕ ತಮ್ಮ ಸರಕಾರದ ಅಸಾಮರ್ಥ್ಯವನ್ನು, ಆರೋಗ್ಯ ಸಚಿವ ಸುಧಾಕರ್ ಅವರ ಅಯೋಗ್ಯತನವನ್ನು ತೋರಿಸಿಕೊಟ್ಟಿದ್ದಾರೆ. ಇಂತಹ ಸರಕಾರದಲ್ಲಿ ಜೀವ ಉಳಿಯುತ್ತದೆ ಎಂಬ ಭರವಸೆಯನ್ನು ಜನರು ಕೈಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಗಾರಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top