ಅಫ್ಘಾನ್: ಮಸೀದಿಯಲ್ಲಿ ಗುಂಡಿನ ದಾಳಿ
ಒಂದೇ ಕುಟುಂಬದ 8 ಮಂದಿ ಹತ್ಯೆ
ಜಲಾಲಾಬಾದ್,ಎ.18: ಪೂರ್ವ ಅಫ್ಘಾನಿಸ್ತಾನದ ಮಸೀದಿಯೊಂದರಲ್ಲಿ ಒಂದೇ ಕುಟುಂಬದ ಎಂಟು ಮಂದಿ ಸದಸ್ಯರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಶನಿವಾರ ನೆಡೆದಿದೆ.
ನಂಗರ್ಹಾರ್ ಪ್ರಾಂತದಲ್ಲಿರುವ ಜಲಾಲಾಬಾದ್ ನಗರದ ಮಸೀದಿಯೊಂದರಲ್ಲಿ ಶನಿವಾರ ರಾತ್ರಿ ಶೂಟೌಟ್ ನಡೆದಿದ್ದು, ಭೂವಿವಾದವೇ ಇದಕ್ಕೆ ಕಾರಣವಾಗಿರಬೇಕೆಂದು ಶಂಕಿಸಲಾಗಿದೆ ಎಂದು ಪ್ರಾಂತದ ಗವರ್ನರ್ ಝೈಯುಲ್ ಹಕ್ ಅಮಾರ್ಖಿಲ್ ತಿಳಿಸಿದ್ದಾರೆ.
ಒಂದು ಕುಟುಂಬದ ಐವರು ಸಹೋದರರು ಹಾಗೂ ಅವರ ಮೂವರು ಸೋದರ ಸಂಬಂಧಿಗಳು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು, ಭೂವಿವಾದವೇ ಈ ದುಷ್ಕೃತ್ಯಕ್ಕೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಅಮಾರ್ರ್ಖಿಲ್ ತಿಳಿಸಿದ್ದಾರೆ.
Next Story