ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್ ಗೆ ಎರಡನೇ ಅವಧಿ: ಭದ್ರತಾ ಮಂಡಳಿ ಮತ
photo:twitter (@antonioguterres)
ವಿಶ್ವಸಂಸ್ಥೆ (ನ್ಯೂಯಾರ್ಕ್), ಜೂ. 9: ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ಗೆ ಎರಡನೇ ಅವಧಿ ನೀಡುವ ಪ್ರಸ್ತಾವದ ಪರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಂಗಳವಾರ ಮತ ಹಾಕಿದೆ.
ಪೋರ್ಚುಗಲ್ ನ 72 ವರ್ಷದ ಮಾಜಿ ಪ್ರಧಾನಿ 2017ರಿಂದ ಅಧಿಕಾರದಲ್ಲಿದ್ದಾರೆ, ಅವರು ಎರಡನೇ ಅವಧಿಗಾಗಿ ಸ್ಪರ್ಧಿಸುತ್ತಿದ್ದು, ಅವರಿಗೆ ಯಾರೂ ಎದುರಾಳಿಗಳಿಲ್ಲ.
ಇತರ ಸುಮಾರು 10 ಮಂದಿ ಈ ಹುದ್ದೆಯ ಆಕಾಂಕ್ಷಿಗಳಾಗಿದ್ದರೂ, ಅವರು ಯಾರೂ ಅಧಿಕೃತ ಅಭ್ಯರ್ಥಿಗಳಾಗಿರಲಿಲ್ಲ. ಯಾಕೆಂದರೆ ವಿಶ್ವಸಂಸ್ಥೆಯ 193 ಸದಸ್ಯ ದೇಶಗಳ ಪೈಕಿ ಯಾವ ದೇಶವೂ ಅವರನ್ನು ಅನುಮೋದಿಸಿರಲಿಲ್ಲ.
ಈ ನಿರ್ಣಯವನ್ನು ಇನ್ನು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಔಪಚಾರಿಕವಾಗಿ ಅನುಮೋದಿಸಬೇಕಾಗಿದೆ.
Next Story