ಮೋದಿಯಿಂದಾಗಿ ದೇಶದಲ್ಲಿ 'ಕೊರೊನ ನರಮೇಧ' : ನ್ಯೂ ಯಾರ್ಕ್ ಟೈಮ್ಸ್ ನಲ್ಲಿ ಕುನಾಲ್ ಕಾಮ್ರಾ ವಿಶೇಷ ವಿಡಿಯೋ
"ನಮ್ಮ ಸರಕಾರದ ಕೈಗಳಲ್ಲಿ ರಕ್ತದ ಕಲೆಗಳು ಮೆತ್ತಿಕೊಂಡಿವೆ"
photo: scroll.in
ಹೊಸದಿಲ್ಲಿ: ಅಮೆರಿಕದಿಂದ ಪ್ರಕಟವಾಗುವ ಅಂತಾರಾಷ್ಟ್ರೀಯ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ತನ್ನ ʼಅಭಿಪ್ರಾಯʼ ವಿಭಾಗದಡಿ ಭಾರತದ ಕಾಮಿಡಿಯನ್ ಕುನಾಲ್ ಕಾಮ್ರಾ ರ ವೀಡಿಯೋವನ್ನು ಪ್ರಕಟಿಸಿದೆ. ಭಾರತದಲ್ಲಿನ ಕೋವಿಡ್ ಪರಿಸ್ಥಿತಿ ಮತ್ತು ಪ್ರಧಾನಿ ನರೇಂದ್ರ ಮೋದಿಯ ಪಾತ್ರದ ಕುರಿತಾದಂತೆ ವೀಡಿಯೋದಲ್ಲಿ ಉಲ್ಲೇಖಿಸಲಾಗಿದೆ.
ಕೋವಿಡ್ ಅನ್ನು ತಾನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ಕಳೆದ ಜನವರಿ ತಿಂಗಳಲ್ಲೇ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದು ಮತ್ತು ಅದರ ಬಳಿಕ ನಡೆದ ಸೂಪರ್ ಸ್ಪ್ರೆಡರ್ ಕುಂಭಮೇಳ ಹಾಗೂ ಪಶ್ಚಿಮ ಬಂಗಾಳದ ಚುನಾವಣಾ ರ್ಯಾಲಿಯು ಕೋವಿಡ್ ಹರಡುವಲ್ಲಿ ಯಾವ ರೀತಿ ಪಾತ್ರ ವಹಿಸಿದೆ ಎನ್ನುವುದರ ಕುರಿತು ವೀಡಿಯೋದಲ್ಲಿ ತಿಳಿಸಲಾಗಿದೆ. "ನನ್ನ ಜನರು ಕಾರಣವಿಲ್ಲದೇ ಸಾಯುತ್ತಿದ್ದಾರೆ" "ನಮ್ಮ ಸರಕಾರದ ಕೈಗಳಲ್ಲಿ ರಕ್ತದ ಕಲೆಗಳು ಮೆತ್ತಿಕೊಂಡಿವೆ" ಎಂದು ಕುನಾಲ್ ಕಾಮ್ರಾ ವೀಡಿಯೋದಲ್ಲಿ ತಿಳಿಸಿದ್ದಾರೆ.
Next Story