ಅಮೆರಿಕದ ಬಾಲ ಸೈನಿಕರ ನೇಮಕಾತಿ ಪಟ್ಟಿಯಲ್ಲಿ ಪಾಕಿಸ್ತಾನ
ವಾಶಿಂಗ್ಟನ್, ಜು. 3: ಬಾಲ ಸೈನಿಕರನ್ನು ಬಳಸುವ ದೇಶಗಳ ಪಟ್ಟಿಯಲ್ಲಿ ಅಮೆರಿಕವು ಪಾಕಿಸ್ತಾನವನ್ನು ಸೇರಿಸಿದೆ. ಈ ಪಟ್ಟಿಯಲ್ಲಿ ಒಟ್ಟು 15 ದೇಶಗಳಿವೆ.
ಬಾಲ ಸೈನಿಕರನ್ನು ನೇಮಿಸುವ ಅಥವಾ ಬಳಸುವ ಶಸ್ತ್ರಧಾರಿ ಗುಂಪುಗಳಿಗೆ ಬೆಂಬಲ ನೀಡುವ ವಿದೇಶಿ ಸರಕಾರಗಳನ್ನು ಅಮೆರಿಕವು ಬಾಲ ಸೈನಿಕರ ತಡೆ ಕಾಯ್ದೆಯನ್ವಯ ಈ ಪಟ್ಟಿಗೆ ಸೇರಿಸುತ್ತದೆ.
ಈ ಪಟ್ಟಿಯಲ್ಲಿರುವ ಇತರ ದೇಶಗಳೆಂದರೆ: ಟರ್ಕಿ, ಅಫ್ಘಾನಿಸ್ತಾನ, ಮ್ಯಾನ್ಮಾರ್, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ದ ಕಾಂಗೊ, ಇರಾನ್, ಇರಾಕ್, ಲಿಬಿಯ, ಮಾಲಿ, ನೈಜೀರಿಯ, ಸೊಮಾಲಿಯ, ದಕ್ಷಿಣ ಸುಡಾನ್, ಸಿರಿಯ, ವೆನೆಝುವೆಲ ಮತ್ತು ಯೆಮನ್.
Next Story