28 ಜನರಿದ್ದ ರಶ್ಯದ ವಿಮಾನ ಸಮುದ್ರದಲ್ಲಿ ಪತನ: ವರದಿ
photo: AP
ಮಾಸ್ಕೊ: ರಷ್ಯಾದ ಪೂರ್ವ ಪ್ರದೇಶದ ಕಮ್ ಚಾಟ್ಕಾದಿಂದ ನಾಪತ್ತೆಯಾಗಿದ್ದ 28 ಜನರಿದ್ದ ವಿಮಾನ ಮಂಗಳವಾರ ಸಮುದ್ರಕ್ಕೆ ಪತನಗೊಂಡಿದ್ದು, ವಿಮಾನದ ಅವಶೇಷ ಒಕೋಸ್ಕ್ ಸಮುದ್ರ ತೀರದ ವಿಮಾನ ನಿಲ್ದಾಣದ ರನ್ ವೇಯ 5 ಕಿ.ಮೀ. ದೂರದಲ್ಲಿ ಪತ್ತೆಯಾಗಿದೆ ಎಂದು ಆರ್ಐಎ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.
ಆಂಟನಿ ಎಎನ್ -26 ವಿಮಾನವು ಪ್ರಾದೇಶಿಕ ರಾಜಧಾನಿ ಪೆಟ್ರೊಪಾವ್ಲೋವ್ಸ್ಕ್-ಕಮ್ ಚಾಟ್ ಸ್ಕಿಯಿಂದ ಉತ್ತರ ಕಮ್ ಚಾಟ್ಕಾದ ಪಲಾನಾ ಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ ವಾಯು ಸಂಚಾರ ನಿಯಂತ್ರಣದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು. ನಂತರ ಸುಳಿವು ಸಿಕ್ಕಿರಲಿಲ್ಲ ಎಂದು ರಷ್ಯಾದ ತುರ್ತು ಸಚಿವಾಲಯ ಹೇಳಿದೆ.
ಪ್ರಯಾಣಿಕರಲ್ಲಿ ವಿಲೇಜ್ ಮೇಯರ್ ಓಲ್ಗಾ ಮೊಖಿರೇವಾ ಕೂಡ ಇದ್ದಾರೆ ಎಂದು ಟಾಸ್ ಸಂಸ್ಥೆ ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ
Next Story