ಇರಾನ್ನ ನೂತನ ಅಧ್ಯಕ್ಷರಿಂದ ಅಧಿಕಾರ ಸ್ವೀಕಾರ
ಟೆಹರಾನ್, ಆ. 5: ಇರಾನ್ನ ನೂತನ ಅಧ್ಯಕ್ಷ ಇಬ್ರಾಹೀಮ್ ರೈಸಿ ಗುರುವಾರ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಪ್ರದಾಯವಾದಿ ಮಾಜಿ ನ್ಯಾಯಾಂಗ ಮುಖ್ಯಸ್ಥ ಇಬ್ರಾಹೀಮ್ ಅಧಿಕೃತವಾಗಿ ತನ್ನ ನಾಲ್ಕು ವರ್ಷಗಳ ಅವಧಿಯನ್ನು ಮಂಗಳವಾರವೇ ಆರಂಭಿಸಿದ್ದಾರೆ. ಅಂದು ಅವರಿಗೆ ದೇಶದ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಪ್ರಮಾಣವಚನ ಬೋಧಿಸಿದ್ದಾರೆ.
ಅಮೆರಿಕದ ತೀವ್ರ ಆರ್ಥಿಕ ದಿಗ್ಬಂಧನಗಳಿಂದಾಗಿ ಇರಾನ್ನ ಆರ್ಥಿಕತೆಯು ಸಂಪೂರ್ಣ ಕುಸಿತದ ಹಂತದಲ್ಲಿರುವಾಗ ನೂತನ ಅಧ್ಯಕ್ಷರ ಅಧಿಕಾರಾವಧಿ ಆರಂಭಗೊಂಡಿದೆ.
ಜೂನ್ 18ರಂದು ನಡೆದ ಚುನಾವಣೆಯಲ್ಲಿ ಇಬ್ರಾಹೀಮ್ ಅಧ್ಯಕ್ಷರಾಗಿ ಆಯ್ಕೆಯಾಗಿದದಾರೆ. ಆದರೆ, ಆ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಹಲವು ರಾಜಕೀಯ ನಾಯಕರನ್ನು ನಿಷೇಧಿಸಲಾಗಿತ್ತು. ಹಾಗಾಗಿ ಇತರ ಹೆಚ್ಚಿನ ನಾಯಕರು ಆ ಚುನಾವಣೆಯನ್ನು ಬಹಿಷ್ಕರಿಸಿದ್ದರು.
Next Story