ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನವೇರಲು ನೂಕುನುಗ್ಗಲು: ವೀಡಿಯೋ ವೈರಲ್
ಕಾಬುಲ್ : ಅಫ್ಗಾನಿಸ್ತಾನದ ಮೇಲೆ ತಾಲಿಬಾನಿಗಳು ಸಂಪೂರ್ಣ ಹಿಡಿತ ಸಾಧಿಸುತ್ತಿದ್ದಂತೆಯೇ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿರುವ ಸಾವಿರಾರು ಅಫ್ಗಾನೀಯರು ದೇಶ ಬಿಟ್ಟು ತೆರಳಲು ವಿಮಾನವನ್ನೇರಲು ತಳ್ಳಾಟ ನಡೆಸಿರುವ ವೀಡಿಯೋವೊಂದು ಅಲ್ಲಿನ ಸ್ಥಿತಿಗೆ ಜ್ವಲಂತ ಸಾಕ್ಷಿಯಾಗಿದೆ.
ಕಾಬುಲ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನವನ್ನೇರಲು ನೂರಾರು ಮಂದಿ ಒಬ್ಬರನ್ನೊಬ್ಬರು ದೂಡಿಕೊಂಡು ಮುಂದಕ್ಕೆ ಸಾಗಲು ಯತ್ನಿಸುತ್ತಿರುವುದು ಕಾಣಿಸುತ್ತದೆ. ವಿಮಾನದ ಮೆಟ್ಟಿಲಿನಲ್ಲಿರುವ ನೂರಾರು ಜನರನ್ನು ನೋಡಿ ಕೆಳಗೆ ನಿಂತಿದ್ದ ಹಲವರು ವಿಮಾನವೇರುವ ಯತ್ನವನ್ನು ಕೈಬಿಟ್ಟಂತೆ ಕಾಣಿಸುತ್ತದೆ. ಇನ್ನು ಮೂವರು ಅಫ್ಘಾನ್ ನಾಗರಿಕರು ವಿಮಾನದ ರೆಕ್ಕೆಯಲ್ಲಿ ಕುಳಿತು ಪ್ರಯಾಣಿಸಲು ಯತ್ನಿಸಿದ್ದು, ಅವರು ಎಳಗೆ ಬಿದ್ದಂತಿರುವ ವೀಡಿಯೋಗಳು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿವೆ.
ಈ ಘಟನೆಯ ಕುರಿತಾದಂತೆ ಹಲವರು ತಮ್ಮ ಟ್ವಿಟರ್ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದು, ಅಧಿಕತೃ ಮಾಹಿತಿಗಳು ಇದುವರೆಗೆ ಲಭ್ಯವಾಗಿಲ್ಲ. ಗುಂಪನ್ನು ಚದುರಿಸಲು ಅಲ್ಲಿದ್ದ ಅಮೆರಿಕಾ ಪಡೆಗಳು ಗಾಳಿಯಲ್ಲಿ ಗುಂಡು ಹಾರಿಸಿವೆ.
The sheer helplessness at Kabul airport. It’s heartbreaking! #KabulHasFallen pic.twitter.com/brA3WRdPp8
— Ahmer Khan (@ahmermkhan) August 16, 2021
Two persons fell from plane after hanging on landing gear near Kabul airport. My prayers are with Kabul. #KabulHasFallen #Kabul #KabulFalls #kabulairport #USAabandonedAfghanistan pic.twitter.com/pOW1Js7gHI
— Mehran (@Mehrantweets_) August 16, 2021
The moment a person falls from a plane in Afghanistan, because he were clinging to the tires of the airplane.#Afghanistan #Talibans #Afghanishtan #AfghanWomen #Kabul #KabulHasFallen #kabulairport #AfghanistanBurning #KabulFalls pic.twitter.com/hVb2U3zJ1R
— Musawer khalil andarabi (@MusawerAndarabi) August 16, 2021