ಗಿನಿ: ಎಬೋಲಾ ರೋಗಿಯ 58 ಸಂಪರ್ಕಿತರಿಗೆ ಕ್ವಾರಂಟೈನ್
ಕೊನಕ್ರಿ (ಗಿನಿ), ಆ. 19: ಎಬೋಲಾ ವೈರಸ್ ಸೋಂಕಿಗೆ ಒಳಗಾಗಿರುವ ಮಹಿಳೆಯೊಬ್ಬರೊಂದಿಗೆ ಸಂಪರ್ಕ ಹೊಂದಿರುವ 58 ಮಂದಿಯನ್ನು ಅವರ ಮನೆಗಳಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ಗಿನಿ ದೇಶದ ಅಧಿಕರಿಗಳು ಹೇಳಿದದಾರೆ.
ಗಿನಿ ದೇಶದ ಮಹಿಳೆಯೊಬ್ಬರು ನೆರೆಯ ಐವರಿ ಕೋಸ್ಟ್ ದೇಶದಲ್ಲಿ ಎಬೋಲಾ ಸೋಂಕಿಗೆ ಕಳೆದ ವಾರ ಗುರಿಯಾಗಿದ್ದಾರೆ.
ಗಿನಿಯಲ್ಲಿ ಎಬೋಲಾದ ಎರಡನೇ ಅಲೆ ಮುಕ್ತಾಯಗೊಂಡಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ ಎರಡು ತಿಂಗಳ ಬಳಿಕ ಐವರಿ ಕೋಸ್ಟ್ನಲ್ಲಿ ಸೋಂಕು ಪತ್ತೆಯಾಗಿದೆ.
ಎಬೋಲಾ ಸಾಂಕ್ರಾಮಿಕದಿಂದಾಗಿ 2013-16ರ ಅವಧಿಯಲ್ಲಿ ಪಶ್ಚಿಮ ಆಫ್ರಿಕದಲ್ಲಿ ಸುಮಾರು 11,300 ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ ಗಿನಿ ದೇಶದ 2,300 ಮಂದಿ ಸೇರಿದ್ದಾರೆ.
Next Story