ಅಫ್ಘಾನಿಸ್ತಾನದಿಂದ ಅಮೆರಿಕದ ಸೇನೆಯ ನಿರ್ಗಮನ ಅತ್ಯುತ್ತಮ ನಿರ್ಧಾರ: ಬೈಡನ್
ವಾಷಿಂಗ್ಟನ್: ಅಫ್ಘಾನಿಸ್ತಾನದಿಂದ ಸೇನೆಯನ್ನು ವಾಪಸ್ ಕರೆದಿರುವ ತನ್ನ ನಿರ್ಧಾರವನ್ನು ಮಂಗಳವಾರ ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ “ಇದು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಯಾಗಿತ್ತು’’ ಎಂದು ಹೇಳಿದ್ದಾರೆ.
"ಅಫ್ಘಾನಿಸ್ತಾನದಲ್ಲಿ ಮುಕ್ತ ಕಾರ್ಯಾಚರಣೆಯಲ್ಲಿ ನಾವು ಇನ್ನು ಮುಂದೆ ಸ್ಪಷ್ಟವಾದ ಉದ್ದೇಶವನ್ನು ಹೊಂದಿಲ್ಲ" ಎಂದು ಅವರು ಅಫ್ಘಾನಿಸ್ತಾನದಿಂದ ಅಮೆರಿಕದ ಸೇನೆಯ ಅಂತಿಮ ವಾಪಸಾತಿಯ ಒಂದು ದಿನದ ನಂತರ ಬೈಡನ್ ಹೇಳಿದರು.
"ಇದು ಸರಿಯಾದ ನಿರ್ಧಾರ. ಬುದ್ಧಿವಂತ ನಿರ್ಧಾರ ಹಾಗೂ ಅಮೆರಿಕದ ಅತ್ಯುತ್ತಮ ನಿರ್ಧಾರ" ಎಂದು ಅವರು ಹೇಳಿದರು.
Next Story