ಅಫ್ಘಾನ್ ಸರಕಾರದೊಂದಿಗೆ ಸಂಪರ್ಕ ಮುಂದುವರಿಕೆ: ಚೀನಾ ಘೋಷಣೆ
ಬೀಜಿಂಗ್, ಸೆ.8: ಅಫ್ಘಾನ್ ನಲ್ಲಿ ನೂತನವಾಗಿ ರಚನೆಯಾಗಿರುವ ತಾಲಿಬಾನ್ ಸರಕಾರ ಆ ದೇಶದ ಪುನರ್ಸಂಘಟನೆಯ ನಿಟ್ಟಿನಲ್ಲಿ ಒಂದು ಅಗತ್ಯದ ಹೆಜ್ಜೆಯಾಗಿದ್ದು ನೂತನ ಸರಕಾರದೊಂದಿಗಿನ ತನ್ನ ಸಂಪರ್ಕ ಮುಂದುವರಿಯಲಿದೆ ಎಂದು ಚೀನಾ ಹೇಳಿದೆ. ಅಫ್ಘಾನ್ನಲ್ಲಿ ಘೋಷಣೆಯಾಗಿರುವ ನೂತನ ಸರಕಾರವನ್ನು ಚೀನಾ ಮಾನ್ಯ ಮಾಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಚೀನಾದ ವಿದೇಶ ವ್ಯವಹಾರ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಅಫ್ಘಾನ್ ನ ಸಾರ್ವಭೌಮತ್ವ, ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆಯನ್ನುಚೀನಾ ಗೌರವಿಸುತ್ತದೆ ಎಂದರು.
ಅಫ್ಘಾನ್ ನ ನೂತನ ಆಡಳಿತ ಎಲ್ಲಾ ವರ್ಗ ಮತ್ತು ಸಮುದಾಯದ ಜನರ ಆಶಯಗಳಿಗೆ ಪೂರಕವಾಗಿ ಸ್ಪಂದಿಸಲಿದೆ ಮತ್ತು ಈ ಮೂಲಕ ದೇಶದ ಜನರ ಆಕಾಂಕ್ಷೆ ಮತ್ತು ಅಂತರಾಷ್ಟ್ರೀಯ ಸಮುದಾಯದ ನಿರೀಕ್ಷೆಗಳನ್ನು ವಿಫಲಗೊಳಿಸದು ಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದು ವಾಂಗ್ ಹೇಳಿದ್ದಾರೆ.
Next Story