ಪುರುಷ ಶಿಕ್ಷಕರು, ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಲು ತಾಲಿಬಾನ್ ಆದೇಶ
photo: twitter.com/timesofindia
ಕಾಬೂಲ್, ಸೆ.17: ಪುರುಷ ಶಿಕ್ಷಕರು ಹಾಗೂ 6ರಿಂದ 12ನೇ ತರಗತಿಯ ಪುರುಷ ವಿದ್ಯಾರ್ಥಿಗಳು ಶನಿವಾರದಿಂದ ಆರಂಭವಾಗುವ ಶಾಲೆಗೆ ಹಾಜರಾಗಬೇಕು ಎಂದು ಅಫ್ಘಾನ್ ನ ಶಿಕ್ಷಣ ಇಲಾಖೆ ಆದೇಶಿಸಿದೆ.
ಶುಕ್ರವಾರ ಫೇಸ್ಬುಕ್ ನಲ್ಲಿ ಪ್ರಕಟವಾದ ಈ ಮಾರ್ಗಸೂಚಿಯಲ್ಲಿ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ 1ರಿಂದ 6ನೇ ತರಗತಿವರೆಗಿನ ವಿದ್ಯಾರ್ಥಿನಿಯರು ಶಾಲೆಗೆ ಹಾಜರಾಗಲು ಅವಕಾಶ ನೀಡಲಾಗಿತ್ತು.
ಅಫ್ಘಾನಿಸ್ತಾನದ ಕೆಲವು ಪ್ರಾಂತ್ಯಗಳಲ್ಲಿ ಆರೋಗ್ಯ ಇಲಾಖೆ, ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ, ಇತರ ಯಾವುದೇ ಸಂಸ್ಥೆಗಳಲ್ಲಿನ ಮಹಿಳಾ ಸಿಬಂದಿ ತಮ್ಮ ಕರ್ತವ್ಯ ಮುಂದುವರಿಸಲು ಅವಕಾಶ ನೀಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
Next Story