ಅಮೆರಿಕದಲ್ಲಿ ಹಳಿ ತಪ್ಪಿದ ರೈಲು:ಕನಿಷ್ಠ ಮೂವರು ಮೃತ್ಯು, 50 ಕ್ಕೂ ಹೆಚ್ಚು ಜನರಿಗೆ ಗಾಯ
photo: twitter
ವಾಷಿಂಗ್ಟನ್,: ಅಮೆರಿಕದ ಮೊಂಟಾನಾದಲ್ಲಿ ಶನಿವಾರ ಮಧ್ಯಾಹ್ನ ರೈಲೊಂದು ಹಳಿ ತಪ್ಪಿದ ಪರಿಣಾಮ ಕನಿಷ್ಠ ಮೂವರು ಮೃತಪಟ್ಟಿದ್ದು ಅನೇಕ ಜನರು ಗಾಯ ಗೊಂಡಿದ್ದಾರೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಎಲ್ಲ ಪ್ರಯಾಣಕರು, ಸಿಬ್ಬಂದಿಯನ್ನು ಸುರಕ್ಷಿತವಾಗಿ ತೆರವುಗೊಳಿಸಿದ್ದಾರೆ ಎಂದು ರೈಲ್ವೆ ಆಪರೇಟರ್ ಆಮ್ಟ್ರಾಕ್ ಹೇಳಿದ್ದಾಗಿ ಅಮೆರಿಕದ ಮಾಧ್ಯಮ ವರದಿ ಮಾಡಿದೆ.
"ಆಮ್ಟ್ರಾಕ್ ಸ್ಥಳೀಯ ಅಧಿಕಾರಿಗಳೊಂದಿಗೆ ಗಾಯಗೊಂಡ ಪ್ರಯಾಣಿಕರನ್ನು ಸಾಗಿಸಲು ಹಾಗೂ ಇತರ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಕೆಲಸ ಮಾಡುತ್ತಿದೆ" ಎಂದು ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದ್ದು, ಸುಮಾರು 147 ಪ್ರಯಾಣಿಕರು ಹಾಗೂ 13 ಸಿಬ್ಬಂದಿಗಳು ರೈಲಿನಲ್ಲಿದ್ದರು.
ರೈಲಿನ ಐದು ಬೋಗಿಗಳು ಉತ್ತರ ಮೊಂಟಾನಾದ ಜೋಪ್ಲಿನ್ ಬಳಿ ಸಂಜೆ 4 ಗಂಟೆಗೆ ಹಳಿ ತಪ್ಪಿದವು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
Next Story