ತೈವಾನ್: ವಸತಿ ಕಟ್ಟಡದಲ್ಲಿ ಬೆಂಕಿ, ಕನಿಷ್ಠ 46 ಮಂದಿ ಮೃತ್ಯು
photo: Kaohsiung Fire Department
ತೈಪೆ ಸಿಟಿ: ತೈವಾನ್ನ ಕಾಹ್ಸಿಯುಂಗ್ ನಗರದಲ್ಲಿ ಗುರುವಾರ ಮುಂಜಾನೆ 13 ಅಂತಸ್ತಿನ ಕಟ್ಟಡಕ್ಕೆ ಬೆಂಕಿ ತಗುಲಿ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ ಹಾಗೂ 41 ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ಎಪಿ ವರದಿ ಮಾಡಿದೆ.
ಬೆಂಕಿಯ ಕಾರಣವನ್ನು ಅಧಿಕಾರಿಗಳು ಇನ್ನೂ ಪತ್ತೆಹಚ್ಚಿಲ್ಲ. ಆದಾಗ್ಯೂ, ಬೆಂಕಿ ತಗಲುವ ಮೊದಲು ದೊಡ್ಡ ಸ್ಫೋಟವನ್ನು ಕೇಳಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದರು.
ಜ್ವಾಲೆಯು "ಅತ್ಯಂತ ಭೀಕರವಾಗಿದೆ" ಹಾಗೂ ಅನೇಕ ಮಹಡಿಗಳನ್ನು ನಾಶಪಡಿಸಿದೆ ಎಂದು ಎಪಿ ವರದಿ ಮಾಡಿದೆ,
ಅಗ್ನಿಶಾಮಕ ಅಧಿಕಾರಿಗಳು 79 ಜನರನ್ನು ಆಸ್ಪತ್ರೆಗೆ ಕರೆದೊಯ್ದರು, ಅದರಲ್ಲಿ 14 ಜನರ ಸ್ಥಿತಿ ಗಂಭೀರವಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಕಟ್ಟಡದ 11 ನೇ ಮಹಡಿಯಲ್ಲಿ ಕೆಲವು ನಾಗರಿಕರು ಸಿಲುಕಿರುವ ಭಯವಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
Next Story