ಬ್ರೆಝಿಲ್: ಗ್ರ್ಯಾಮಿ ಪ್ರಶಸ್ತಿ ವಿಜೇತೆ ಹಾಡುಗಾರ್ತಿ ಮರಿಲಿಯಾ ಮೆಂಡೋನ್ಸಾ ವಿಮಾನ ಅವಘಢದಲ್ಲಿ ಮೃತ್ಯು
Photo: Twitter/AljazeeraEnglish
ಬ್ರಸಿಲಿಯಾ: ಬ್ರೆಝಿಲ್ ನ ಖ್ಯಾತ ಯುವ ಹಾಡುಗಾರ್ತಿ ಹಾಗೂ ಗ್ರ್ಯಾಮಿ ಪ್ರಶಸ್ತಿ ವಿಜೇತೆ ಮರಿಲಿಯಾ ಮೆಂಡೋನ್ಸಾ (೨೬) ವಿಮಾನ ಅವಘಡವೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕೃತ ವರದಿಗಳು ತಿಳಿಸಿವೆ. ಆಕೆ ಪ್ರಯಾಣಿಸುತ್ತಿದ್ದ ಸಣ್ಣ ವಿಮಾನವು ಮಿನಾಸ್ ಜೆಯಾಸ್ ಸ್ಟೇಟ್ ಸಮೀಪ ಪತನಗೊಂಡಿದೆ.
ವಿಮಾನ ಅವಘಢದಲ್ಲಿ ಮರಿಲಿಯಾ ಮೆಂಡೋನ್ಸಾ ಅವರ ನಿರ್ಮಾಪಕ ಆಕೆಯ ಸಂಬಂಧಿ ಹಾಗೂ ಇಬ್ಬರು ಪೈಲೆಟ್ ಗಳು ಮೃತಪಟ್ಟಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಪೊಲೀಸ್ ಮುಖ್ಸ್ಥ ಐವನ್ ಲೊಪೆಜ್ ತಿಳಿಸಿದ್ದಾರೆ.
"ವಿಮಾನ ಅಪಘಾತಕ್ಕೆ ಕಾರಣವೇನು ಎಂದು ನಾವು ಇನ್ನೂ ಹೇಳಲು ಸಾಧ್ಯವಿಲ್ಲ, ಆದರೆ ವಿಮಾನವು ಬೀಳುವ ಮೊದಲು (ಪವರ್) ಆಂಟೆನಾಗೆ ಡಿಕ್ಕಿ ಹೊಡೆದಿದೆ ಎಂದು ಸೂಚಿಸುವ ಹಾನಿಗಳು ಕಂಡು ಬಂದಿದೆ" ಎಂದು ಲೋಪೆಜ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
Brazil country singer Marilia Mendonca killed in small airplane crash https://t.co/R1BCFIe0Pv pic.twitter.com/ydkv1ScYCG
— Reuters (@Reuters) November 6, 2021
Next Story