ಪ್ರಜಾಪ್ರಭುತ್ವ ಶೃಂಗಸಭೆಗೆ ತೈವಾನ್ ಗೆ ಆಹ್ವಾನ ಅಮೆರಿಕದ ಕ್ರಮಕ್ಕೆ ಚೀನಾ ಆಕ್ರೋಶ
ವಾಷಿಂಗ್ಟನ್, ನ.24: ಪ್ರಜಾಪ್ರಭುತ್ವದ ಕುರಿತು ವರ್ಚುವಲ್ ವೇದಿಕೆ ಮೂಲಕ ನಡೆಯಲಿರುವ ಶೃಂಗಸಭೆಗೆ ಸ್ವಯಂ ಆಡಳಿತ ವ್ಯವಸ್ಥೆಯಿರುವ ತೈವಾನ್ಗೆ ಆಹ್ವಾನ ನೀಡಿರುವ ಅಮೆರಿಕದ ಕ್ರಮಕ್ಕೆ ಚೀನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಇದಕ್ಕೆ ತನ್ನ ವಿರೋಧವಿದೆ ಎಂದಿದೆ.
ತೈವಾನ್ ಚೀನಾ ಪ್ರದೇಶದ ಅವಿಭಾಜ್ಯ ಅಂಗವಾಗಿದೆ. ತೈವಾನ್ ಅಧಿಕಾರಿಗಳು ತಥಾಕಥಿತ ಪ್ರಜಾಪ್ರಭುತ್ವ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಅಮೆರಿಕ ನೀಡಿರುವ ಆಹ್ವಾನವನ್ನು ನಾವು ದೃಢವಾಗಿ ವಿರೋಧಿಸುತ್ತೇವೆ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಝಾವೊ ಲಿಜಿಯನ್ ಹೇಳಿದ್ದಾರೆ.
Next Story