ಅಝರ್ ಬೈಜಾನ್: ಮಿಲಿಟರಿ ಹೆಲಿಕಾಪ್ಟರ್ ಪತನ; 14 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ
ಬಾಕು(ಅಝರ್ ಬೈಜಾನ್): ತರಬೇತಿ ಹಾರಾಟದ ವೇಳೆ ಕಾಕಸಸ್ ದೇಶದ ಪೂರ್ವದಲ್ಲಿ ಮಂಗಳವಾರ ಅಝರ್ ಬೈಜಾನ್ ಮಿಲಿಟರಿ ಹೆಲಿಕಾಪ್ಟರ್ ವೊಂದು ಪತನಗೊಂಡ ಪರಿಣಾಮವಾಗಿ ಹದಿನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ರಾಜ್ಯ ಗಡಿ ಸೇವಾ ಹೆಲಿಕಾಪ್ಟರ್ ಪತನಗೊಂಡ ಪರಿಣಾಮವಾಗಿ ಹದಿನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ" ಎಂದು ಮಾಜಿ ಸೋವಿಯತ್ ಗಣರಾಜ್ಯದ ಗಡಿ ಸಿಬ್ಬಂದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೃತಪಟ್ಟವರೆಲ್ಲರೂ ಮಿಲಿಟರಿ ಸೈನಿಕರು ಎಂದು ಅದು ಹೇಳಿದೆ.
"ಅಝರ್ ಬೈಜಾನ್ ರಾಜ್ಯ ಗಡಿ ಸೇವೆಗೆ ಸೇರಿದ ಮಿಲಿಟರಿ ಹೆಲಿಕಾಪ್ಟರ್ ಇಂದು ಖೈಝಿ ಪ್ರದೇಶದ ಗರಾಖೇಬಾತ್ ಏರ್ಫೀಲ್ಡ್ನಲ್ಲಿ ಬೆಳಗ್ಗೆ ಸುಮಾರು 10:40 ಸುಮಾರಿಗೆ ತರಬೇತಿ ಹಾರಾಟ ನಡೆಸುತ್ತಿದ್ದಾಗ ಅಪಘಾತಕ್ಕೀಡಾಯಿತು" ಎಂದು ಮಂಗಳವಾರ ದೇಶದ ಗಡಿ ಸೇವೆ ಮತ್ತು ಪ್ರಾಸಿಕ್ಯೂಟರ್ ಜನರಲ್ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅಪಘಾತದ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
Next Story