ಗಲ್ಫ್ ನಲ್ಲಿ ಒಮೈಕ್ರಾನ್ ನ ಮೊದಲ ಪ್ರಕರಣ ದೃಢಪಡಿಸಿದ ಸೌದಿ ಅರೇಬಿಯಾ
ಸಾಂದರ್ಭಿಕ ಚಿತ್ರ (PTI)
ರಿಯಾದ್: ಉತ್ತರ ಆಫ್ರಿಕಾದಿಂದ ಹಿಂದಿರುಗಿದ ನಾಗರಿಕರಲ್ಲಿ ಕೊರೊನಾವೈರಸ್ ನ ಒಮೈಕ್ರಾನ್ ರೂಪಾಂತರ ಕಂಡುಬಂದಿದೆ. ಈ ಮೂಲಕ ಗಲ್ಫ್ ನಲ್ಲಿ ಒಮೈಕ್ರಾನ್ ನ ಮೊದಲ ದೃಢಪಡಿಸಿದ ಪ್ರಕರಣವನ್ನು ದಾಖಲಿಸಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಒಮೈಕ್ರಾನ್ ರೂಪಾಂತರದ ಒಂದು ಪ್ರಕರಣವು ರಾಜ್ಯದಲ್ಲಿ ಪತ್ತೆಯಾಗಿದೆ. ಇದು ಉತ್ತರ ಆಫ್ರಿಕಾದ ದೇಶದಿಂದ ಬಂದಿರುವ ನಾಗರಿಕನಲ್ಲಿ ಪತ್ತೆಯಾಗಿದೆ. ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಹಾಗೂ ಅಗತ್ಯ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ಸಚಿವಾಲಯದ ಅಧಿಕಾರಿ ರಾಜ್ಯ SPA ಸುದ್ದಿ ಸಂಸ್ಥೆಗೆ ತಿಳಿಸಿದರು.
Next Story