ಒಮೈಕ್ರಾನ್ ಆತಂಕ:ವಿಮಾನ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷಾ ವರದಿ ಕಡ್ಡಾಯಗೊಳಿಸಿದ ಅಮೆರಿಕ
ವಾಷಿಂಗ್ಟನ್: ಹೊಸ ಒಮೈಕ್ರಾನ್ ರೂಪಾಂತರದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆ ಭಾರತ ಸೇರಿದಂತೆ ಎಲ್ಲಾದೇಶಗಳಿಂದ ಒಳಬರುವ ಪ್ರಯಾಣಿಕರು ನೆಗೆಟಿವ್ ಕೋವಿಡ್-19 ಪರೀಕ್ಷಾ ವರದಿ ಅಥವಾ ಸಾಂಕ್ರಾಮಿಕದಿಂದ ಚೇತರಿಸಿಕೊಂಡ ಪುರಾವೆಯನ್ನು ಒಯ್ಯುವುದನ್ನು ಅಮೆರಿಕ ಕಡ್ಡಾಯಗೊಳಿಸಿದೆ.
ಹೊಸ ಪ್ರೋಟೋಕಾಲ್ ಡಿಸೆಂಬರ್ 6 ರಿಂದ ಜಾರಿಗೆ ಬರುತ್ತದೆ ಎಂದು ಆರೋಗ್ಯ ಹಾಗೂ ಮಾನವ ಸೇವೆಗಳ ಇಲಾಖೆ (ಎಚ್ ಎಚ್ಎಸ್) ನಲ್ಲಿರುವ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ತಿಳಿಸಿದೆ.
"ಈ ತಿದ್ದುಪಡಿಯು ಅಮೆರಿಕಕ್ಕೆ ವಿಮಾನ ಹತ್ತುವ 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವಿಮಾನ ಪ್ರಯಾಣಿಕರಿಗೆ ಕೋವಿಡ್-19 ಪರೀಕ್ಷೆಯ ಅವಶ್ಯಕತೆಗಳನ್ನು ನವೀಕರಿಸುತ್ತದೆ" ಎಂದು ಭಾರತೀಯ ಸರಕಾರಿ ಅಧಿಕಾರಿಗಳು ಶನಿವಾರ ಭಾರತೀಯ-ಅಮೆರಿಕನ್ ಸಮುದಾಯದ ಮುಖಂಡರಿಗೆ ತಿಳಿಸಿದರು.
Next Story