ಶ್ರೀಲಂಕಾ ನೌಕಾಪಡೆಯಿಂದ 43 ಭಾರತೀಯ ಬೆಸ್ತರ ಬಂಧನ
ಸಾಂದರ್ಭಿಕ ಚಿತ್ರ
ಕೊಲೊಂಬೊ,ಡಿ.19: ಶ್ರೀಲಂಕಾದ ಸಾಗರಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ 43 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿರುವುದಾಗಿ ಶ್ರೀಲಂಕಾ ನೌಕಾಪಡೆ ರವಿವಾರ ತಿಳಿಸಿದೆ.
ಜಾಫ್ನಾದ ಡೆಲ್ಫ್ ದ್ವೀಪದ ಆಗ್ನೇಯದಲ್ಲಿನ ಸಮುದ್ರಪ್ರದೇಶದಲ್ಲಿ ಶನಿವಾರ ನಡೆಸಿದ ಈ ವಿಶೇಷ ಕಾರ್ಯಾಚರಣೆಯಲ್ಲಿ 6 ಭಾರತೀಯ ಮೀನುಗಾರಿಕಾ ಟ್ರಾಲರ್ ದೋಣಿಗಳನ್ನು ಕೂಡಾ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ನೌಕಾಪಡೆಯು ಹೇಳಿಕೆಯಲ್ಲಿ ತಿಳಿಸಿದೆ.
ಸೂಕ್ತ ಕಾನೂನುಕ್ರಮ ಕೈಗೊಳ್ಳಲು ಬಂಧಿತ ಭಾರತೀಯ ಬೆಸ್ತರನ್ನು ಕೊರೋನ ತಪಾಸಣೆಗಾಗಿ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗೆ ಸಂಬಂಧಪಟ್ಟ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಅಂದು ಶ್ರೀಲಂಕಾ ನೌಕಾಪಡೆಯ ಹೇಳಿಕೆ ತಿಳಿಸಿದೆ.
Next Story