3000 ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಿದ ಉಕ್ರೇನ್: ರಶ್ಯಾ ಅಧ್ಯಕ್ಷ ಪುಟಿನ್ ಆರೋಪ
ಮಾಸ್ಕೋ: 3000 ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿ ಇರಿಸಿದೆ ಎಂದು ಗುರುವಾರ ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರೋಪಿಸಿದ್ದಾರೆಂದು Indiatoday.com ವರದಿ ಮಾಡಿದೆ.
ಭಾರತೀಯ ವಿದ್ಯಾರ್ಥಿಗಳನ್ನು ಮಾತ್ರವಲ್ಲದೆ, ಚೀನೀ ವಿದ್ಯಾರ್ಥಿಗಳು ಕೂಡಾ ಉಕ್ರೇನ್ ಒತ್ತೆಯಾಳಾಗಿಸಿದೆ. ವಿದ್ಯಾರ್ಥಿಗಳ ತೆರವುಗೊಳಿಸುವ ಪ್ರಕ್ರಿಯೆಯನ್ನು ಉಕ್ರೇನ್ ವಿಳಂಬಗೊಳಿಸುತ್ತಿದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಗಿರಿಸಿರುವ ಬಗ್ಗೆ ವರದಿ ಬಂದಾಗಲೇ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿತ್ತು.
Next Story