ಕಾಬೂಲ್ನಲ್ಲಿ 4.2 ಡಿಗ್ರಿ ತೀವೃತೆಯ ಭೂಕಂಪ
ಕಾಬೂಲ್, ಮಾ.19: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಶನಿವಾರ ರಿಕ್ಟರ್ ಮಾಪಕದಲ್ಲಿ 4.2 ಡಿಗ್ರಿ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಇಲಾಖೆ ಹೇಳಿದೆ. ಮಾರ್ಚ್ 19ರಂದು ಬೆಳಿಗ್ಗೆ 7 ಗಂಟೆ 23 ನಿಮಿಷಕ್ಕೆ ಕಾಬೂಲ್ನಲ್ಲಿ ಭೂಕಂಪ ಸಂಭವಿಸಿದೆ. ಕಾಬೂಲ್ನ 344 ಕಿ.ಮೀ ಪಶ್ಚಿಮದಲ್ಲಿ ನೆಲದೊಳಗೆ 65.45 ಮೀಟರ್ ಆಳದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು ಎಂದು ಇಲಾಖೆ ಟ್ವೀಟ್ ಮಾಡಿದೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿಗೆ ನಷ್ಟದ ಬಗ್ಗೆ ಇದುವರೆಗೆ ಮಾಹಿತಿ ಲಭಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story