ಉಕ್ರೇನ್: ಮರಿಯುಪೋಲ್ ಥಿಯೇಟರ್ ಮೇಲೆ ರಷ್ಯಾ ದಾಳಿ; 300 ಮಂದಿ ಸಾವನ್ನಪ್ಪಿರುವ ಶಂಕೆ
ಸಾಂದರ್ಭಿಕ ಚಿತ್ರ (PTI)
ಕೀವ್: ನೂರಾರು ಜನರು ಆಶ್ರಯ ಪಡೆದಿದ್ದ ಥಿಯೇಟರ್ ಮೇಲೆ ಕಳೆದ ವಾರ ರಷ್ಯಾ ನಡೆಸಿದ್ದ ದಾಳಿಯಲ್ಲಿ ಸುಮಾರು 300 ಜನರು ಸಾವನ್ನಪ್ಪಿರಬಹುದು ಎಂದು ಬಂದರು ನಗರವಾದ ಮಾರಿಯುಪೋಲ್ನಲ್ಲಿರುವ ಉಕ್ರೇನಿಯನ್ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
"ರಷ್ಯಾ ವಿಮಾನದ ದಾಳಿಯ ನಂತರ ಮಾರಿಯುಪೋಲ್ ಡ್ರಾಮಾ ಥಿಯೇಟರ್ನಲ್ಲಿ ಸುಮಾರು 300 ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯು ಪ್ರತ್ಯಕ್ಷದರ್ಶಿಗಳಿಂದ ತಿಳಿದುಬಂದಿದೆ" ಎಂದು ಮಾರಿಯುಪೋಲ್ ಸಿಟಿ ಹಾಲ್ ಟೆಲಿಗ್ರಾಮ್ನಲ್ಲಿ ಬರೆದಿದೆ.
ಮಾರ್ಚ್ 16 ರಂದು ರಷ್ಯಾದ ಪಡೆಗಳು ಉಕ್ರೇನಿಯನ್ ಬಂದರು ನಗರವಾದ ಮರಿಯುಪೋಲ್ನಲ್ಲಿರುವ ಥಿಯೇಟರ್ನಲ್ಲಿ ಶಕ್ತಿಯುತ ಬಾಂಬ್ ಅನ್ನು ಬೀಳಿಸಿತ್ತು. ಅಧಿಕಾರಿಗಳ ಪ್ರಕಾರ ಮಕ್ಕಳು ಸೇರಿದಂತೆ "ಸಾವಿರಕ್ಕೂ ಹೆಚ್ಚು" ಮಂದಿ ಥಿಯೇಟರ್ ನಲ್ಲಿ ಆಶ್ರಯ ಪಡೆದಿದ್ದರು.
Next Story