ಅಮೆರಿಕ: ಸುಂಟರಗಾಳಿಯಿಂದ ಒಬ್ಬ ವ್ಯಕ್ತಿ ಮೃತ್ಯು; 40ಕ್ಕೂ ಅಧಿಕ ಮಂದಿಗೆ ಗಾಯ
ನ್ಯೂಯಾರ್ಕ್, ಮೇ 21: ಅಮೆರಿಕದ ಮಿಚಿಗನ್ ರಾಜ್ಯದಲ್ಲಿ ಶನಿವಾರ ಬೀಸಿದ ಸುಂಟರಗಾಳಿಯ ಅಬ್ಬರಕ್ಕೆ ಸಿಲುಕಿ ಓರ್ವ ವ್ಯಕ್ತಿ ಮೃತಪಟ್ಟಿದ್ದು 40ಕ್ಕೂ ಅಧಿಕ ಮಂದಿ ಗಾಂುಗೊಂಡಿರುವುದಾಗಿ ವರದಿಯಾಗಿದೆ.
ಒಸ್ಟೆಗೊ ಪ್ರಾಂತದ ಗೆಲಾರ್ಡ್ ನಗರದಲ್ಲಿ ವ್ಯಾಪಕ ನಾಶ ನಷ್ಟ ಸಂಭವಿಸಿದ್ದು ಹಲವು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಸುಂಟರ ಗಾಳಿಗೆ ಸಿಲುಕಿ ಕಾರುಗಳು ತರಗೆಲೆಯಂತೆ ಮೇಲೆ ಹಾರಿಬೀಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಲವು ಮನೆಗಳಿಗೆ ಹಾಗೂ ಅಂಗಡಿಗಳಿಗೆ ಹಾನಿಯಾಗಿದ್ದು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿರುವುದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ ಎಂದು ಮಿಚಿಗನ್ ಪೊಲೀಸರು ಹೇಳಿದ್ದಾರೆ.
Next Story