6 ದಿನದೊಳಗೆ ಹೊಸ ಚುನಾವಣೆ ಘೋಷಿಸಿ: ಪಾಕ್ ಸರಕಾರಕ್ಕೆ ಇಮ್ರಾನ್ ಗಡುವು

-

ಇಸ್ಲಮಾಬಾದ್, ಮೇ 26: ಪ್ರಾಂತೀಯ ಅಸೆಂಬ್ಲಿಗಳನ್ನು ವಿಸರ್ಜಿಸಲು ಮತ್ತು ಹೊಸದಾಗಿ ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಲು ಆಮದು ಮಾಡಿಕೊಂಡ ಸರಕಾರಕ್ಕೆ 6 ದಿನಗಳ ಗಡುವು ನೀಡಲಾಗಿದೆ. ಒಂದು ವೇಳೆ ಆಮದು ಸರಕಾರ ಇದಕ್ಕೆ ವಿಫಲವಾದರೆ ಸಂಪೂರ್ಣ ದೇಶದೊಂದಿಗೆ ರಾಜಧಾನಿ ಇಸ್ಲಮಾಬಾದ್‌ಗೆ ಮರಳಿ ಬರುತ್ತೇನೆ ಎಂದು ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್‌ಖಾನ್ ಘೋಷಿಸಿದ್ದಾರೆ. 

ಗುರುವಾರ ಬೆಳಿಗ್ಗೆ ಇಸ್ಲಮಾಬಾದ್‌ನ ಜಿನ್ನಾ ಅವೆನ್ಯೂವಿನಲ್ಲಿ ಆಝಾದಿ ಜಾಥಾದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಪಕ್ಷ ಹಮ್ಮಿಕೊಂಡ ಶಾಂತಿಯುತ ಜಾಥಾವನ್ನು ತಡೆಯಲು ಸರಕಾರ ಅಶ್ರುವಾಯು ಪ್ರಯೋಗ, ಲಾಠಿಚಾರ್ಜ್ ನಡೆಸಿದೆ. ಪಕ್ಷದ ಕಾರ್ಯಕರ್ತರು, ಮುಖಂಡರ ನಿವಾಸದ ಮೇಲೆ ದಾಳಿ, ಬಂಧನ ಮತ್ತಿತರ ತಂತ್ರವನ್ನು ಬಳಸಿದೆ. ಆದರೆ ದೇಶದ ಸುಪ್ರೀಂಕೋರ್ಟ್ ಈ ವಿಷಯವನ್ನು ಗಮನಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ಮೇಲೆ ಭಾರೀ ಜವಾಬ್ದಾರಿಯಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತರೀತಿಯ ಪ್ರತಿಭಟನೆಗೆ ಅವಕಾಶವಿಲ್ಲವೇ? ಪ್ರತಿಭಟನಾಕಾರರು ಲಾಠಿಚಾರ್ಜ್, ಅಶ್ರುವಾಯುಗೆ ಎದೆಯೊಡ್ಡಬೇಕೇ ಎಂದು ಇಮ್ರಾನ್ ಪ್ರಶ್ನಿಸಿದರು.

ಸಂಸತ್ತು ವಿಸರ್ಜಿಸಿ ಹೊಸ ಚುನಾವಣೆ ಘೋಷಣೆ ಆಗುವವರೆಗೂ ಇಲ್ಲಿಂದ ಕದಲಬಾರದು ಎಂದು ನಿರ್ಧರಿಸಿದ್ದೆ. ಆದರೆ ಹಾಗೆ ಮಾಡಿದರೆ ಸರಕಾರಕ್ಕೆ ಖುಷಿಯಾಗುತ್ತದೆ, ಯಾಕೆಂದರೆ ಆಗ ಜನತೆ, ಪೊಲೀಸರು ಹಾಗೂ ಸೇನೆಯ ಮಧ್ಯೆ ಘರ್ಷಣೆ ಆರಂಭವಾಗುತ್ತದೆ. ಸರಕಾರ ಇದನ್ನೇ ಬಯಸುತ್ತಿದೆ ಎಂದು ತಿಳಿದ ಕಾರಣ ನಿರ್ಧಾರ ಬದಲಿಸಿದ್ದೇನೆ. ಕಳೆದ 24 ಗಂಟೆಯಲ್ಲಿ ಸರಕಾರ ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯುವುದನ್ನು ಗಮನಿಸಿದ್ದೇನೆ. ಸರಕಾರವು ದೇಶ ಮತ್ತು ಪೊಲೀಸರ ನಡುವೆ ಒಡಕು ಮೂಡಿಸಲು ಪ್ರಯತ್ನಿಸುತ್ತಿದೆ ಎಂದರು. 

ಆಝಾದಿ ಜಾಥಾವನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದಾಗ ನಡೆದ ಸಂಘರ್ಷದಲ್ಲಿ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ 5 ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ. ಇದರಲ್ಲಿ ಓರ್ವ ಅಶ್ರುವಾಯುವಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸೇತುವೆಯಿಂದ ಕೆಳಗೆ ನದಿಗೆ ಬಿದ್ದಿದ್ದಾನೆ. ಮತ್ತೊಬ್ಬನನ್ನು ಪೊಲೀಸರು ರಾವಿ ನದಿಗೆ ತಳ್ಳಿದ್ದಾರೆ ಎಂದು ಇಮ್ರಾನ್‌ಖಾನ್ ಆರೋಪಿಸಿದ್ದಾರೆ. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top