ಲಾಸ್ ಏಂಜಲೀಸ್ ನಲ್ಲಿ ಶೂಟಿಂಗ್: 2 ಸಾವು, 5 ಮಂದಿಗೆ ಗಾಯ
ಲಾಸ್ ಏಂಜಲಿಸ್, ಜು. 25: ಲಾಸ್ ಏಂಜಲಿಸ್ನ ಉದ್ಯಾನವೊಂದರಲ್ಲಿ ರವಿವಾರ ಸಂಜೆ ಎರಡು ಗುಂಪುಗಳ ನಡುವೆ ಗುಂಡಿನ ಕಾಳಗ ನಡೆದು ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಐವರು ಗಾಯಗೊಂಡಿದ್ದಾರೆ. ಲಾಸ್ ಏಂಜಲಿಸ್ನ ಸ್ಯಾನ್ ಪೆಡ್ರೊದಲ್ಲಿರುವ ಪೆಕ್ ಪಾರ್ಕ್ನಲ್ಲಿ ಸಂಜೆ ಕಾರು ಪ್ರದರ್ಶನವೊಂದು ನಡೆಯುತ್ತಿದ್ದು, ಆ ಸಂದರ್ಭದಲ್ಲಿ ಮಾರಾಮಾರಿ ಸಂಭವಿಸಿದೆ ಎಂದು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.
ಪೆಕ್ ಪಾರ್ಕ್ನಲ್ಲಿ ಎರಡು ತಂಡಗಳ ನಡುವೆ ವಿವಾದವೊಂದು ತಲೆದೋರಿದ ಬಳಿಕ ಗುಂಡಿನ ಕಾಳಗ ನಡೆಯಿತು ಎಂದು ಲಾಸ್ ಏಂಜಲಿಸ್ ಪೊಲೀಸ್ ಇಲಾಖೆಯ ಕ್ಯಾಪ್ಟನ್ ಕೆಲ್ಲಿ ಮುನಿಝ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗುಂಡಿನ ಕಾಳಗದಲ್ಲಿ ಒಟ್ಟು ಏಳು ಮಂದಿ ಗಾಯಗೊಂಡಿದ್ದು, ಅವರ ಪೈಕಿ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಐವರು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Next Story