ಕೆನಡಾದ ವ್ಯಾಂಕೋವರ್ನಲ್ಲಿ ಗುಂಡಿನ ದಾಳಿ: ಮೂವರು ಮೃತ್ಯು
ಮಾಂಟ್ರಿಯಲ್: ಕೆನಡಾದ ವ್ಯಾಂಕೋವರ್ನಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಂತಕ ಕೂಡಾ ಪೊಲೀಸರ ಜತೆ ನಡೆದ ಚಕಮಕಿಯಲ್ಲಿ ಹತನಾಗಿದ್ದಾನೆ. ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ. ಹಂತಕ ವಸತಿ ರಹಿತ ಜನರನ್ನು ಗುರು ಮಾಡಿದ್ದ ಎನ್ನಲಾಗಿದೆ.
"ಒಬ್ಬ ಬಂದೂಕುಧಾರಿ ನಾಲ್ವರಿಗೆ ಗುಂಡು ಹೊಡೆದಿದ್ದಾನೆ ಎನ್ನುವುದನ್ನು ದೃಢಪಡಿಸಬಲ್ಲೆ" ಎಂದು ಲ್ಯಾಂಗ್ಲೆ ಪೊಲೀಸ್ ಮುಖ್ಯಸ್ಥ ಘಲೀಬ್ ಭಯಾನಿ ಹೇಳಿದ್ದಾರೆ. ಇಬ್ಬರು ಸಂತ್ರಸ್ತರು ಮೃತಪಟ್ಟಿದ್ದಾರೆ. ಒಬ್ಬಾಕೆ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ನಾಲ್ಕನೇ ವ್ಯಕ್ತಿಯ ಕಾಲಿಗೆ ಗುಂಡೇಟು ತಗುಲಿದೆ ಎಂದು ವಿವರಿಸಿದ್ದಾರೆ.
ಘಟನೆಯ ಸಂತ್ರಸ್ತರು ಹಾಗೂ ಶಂಕಿತ ವ್ಯಕ್ತಿಯ ಗುರುತು ಪತ್ತೆ ಮಾಡುವ ಕಾರ್ಯ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ವ್ಯಕ್ತಿಗಳು ಯಾರು ಎಂಬ ಬಗ್ಗೆ ದೃಢಪಡಿಸಿಕೊಳ್ಳುವ ಪ್ರಯತ್ನ ನಡೆದಿದ್ದು, ಅವರು ನಿರ್ಗತಿಕರು ಎನ್ನುವುದು ದೃಢಪಡಿಸಲು ಸಾಧ್ಯವಾಗಿಲ್ಲ ಎಂದು ತನಿಖಾಧಿಕಾರಿ ಡೇವಿಡ್ ಲೀ ಹೇಳಿದ್ದಾರೆ. ಪೊಲೀಸರು ರವಾನಿಸಿದ ಎಚ್ಚರಿಕೆ ಸಂದೇಶದ ಚಿತ್ರಗಳನ್ನು ಹಲವು ಮಂದಿ ಟ್ವೀಟ್ ಮಾಡಿದ್ದಾರೆ.