ಸೌದಿ ಸಚಿವರನ್ನು ಭೇಟಿಯಾದ ಚೀನಾ ರಾಯಭಾರಿ
PHOTO ; ARAB NEWS
ರಿಯಾದ್, ಆ.೨೫: ಸೌದಿ ಅರೆಬಿಯಾದ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ವಲೀದ್ ಅಲ್-ಖುರಾಜಿ ಬುಧವಾರ ಸೌದಿ ಅರೆಬಿಯಾಕ್ಕೆ ಚೀನಾದ ರಾಯಭಾರಿ ಚೆನ್ ವೆಯ್ಖಿಂಗ್ರನ್ನು ರಿಯಾದ್ನಲ್ಲಿ ಭೇಟಿಯಾದರು ಎಂದು ವರದಿಯಾಗಿದೆ.
ದ್ವಿಪಕ್ಷೀಯ ಸಂಬಂಧಗಳು ಹಾಗೂ ಅವುಗಳನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಉಭಯ ಮುಖಂಡರು ಚರ್ಚೆ ನಡೆಸಿದರು ಹಾಗೂ ಸಮಾನ ಹಿತಾಸಕ್ತಿಯ ವಿಷಯದಲ್ಲಿ ಪರಸ್ಪರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಸೌದಿಯ ರಾಜಕೀಯ ವ್ಯವಹಾರ ಇಲಾಖೆಯ ಸಹಾಯಕ ಸಚಿವ ಡಾ. ಸವದ್ ಅಲ್ಸತಿ ಅವರೂ ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
Next Story