ತಾಯಿಯ ಹತ್ಯೆ ಪ್ರಕರಣ ನಟ ರಯಾನ್ಗೆ ಜೀವಾವಧಿ ಶಿಕ್ಷೆ
ವಾಷಿಂಗ್ಟನ್, ಸೆ.23: ‘ರಿವರ್ಡೇಲ್’ ಟಿವಿ ಕ್ರೈಮ್ ಧಾರಾವಾಹಿಯಿಂದ ಜನಪ್ರಿಯಗೊಂಡಿದ್ದ ಅಮೆರಿಕದ ನಟ ರಯಾನ್ ಗ್ರಾಂಥಾಮ್ ತಾಯಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿದ್ದು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ.
2020ರಲ್ಲಿ ನಟ ತನ್ನ ಮನೆಯಲ್ಲಿ ಜಗಳವಾಡಿ 64 ವರ್ಷದ ತಾಯಿಯ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದ. ಬಳಿಕ ಪೊಲೀಸ್ ಠಾಣೆಗೆ ಹೋಗಿ ತಾಯಿಯನ್ನು ಕೊಲೆ ಮಾಡಿದ್ದಾಗಿ ಸ್ವತಃ ತಿಳಿಸಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಬ್ರಿಟಿಷ್ ಕೊಲಂಬಿಯಾ ಸುಪ್ರೀಂಕೋರ್ಟ್ ರಯಾನ್ ಗ್ರಾಂಥಮ್(24 ವರ್ಷ) 14 ವರ್ಷ ಜೈಲುಶಿಕ್ಷೆ ವಿಧಿಸಿದೆ ಮತ್ತು ಈ ಅವಧಿಯಲ್ಲಿ ಪರೋಲ್ ಪಡೆಯಲು ಅವಕಾಶ ನೀಡಬಾರದು ಎಂದು ಸೂಚಿಸಿದೆ. ಟಿವಿ ಧಾರಾವಾಹಿಯ ಜತೆಗೆ ಹಲವು ಸಿನೆಮಾಗಳಲ್ಲೂ ಗ್ರಾಂಥಮ್ ಪಾತ್ರ ನಿರ್ವಹಿಸಿದ್ದರು.
Next Story