ಆಕಾಶದಲ್ಲಿದ್ದ ವಿಮಾನಕ್ಕೆ ನೆಲದಿಂದ ಗುಂಡು: ಪ್ರಯಾಣಿಕನಿಗೆ ಗಾಯ
PHOTO: TWITTER/
@AbdulWaliBughio
ಯಾಂಗಾನ್, ಅ.2: ನೆಲದಲ್ಲಿ ಹಾರಿಸಿದ ಬುಲೆಟ್ ಆಗಸದಲ್ಲಿ ಹಾರುತ್ತಿದ್ದ ವಿಮಾನದ ಕಿಟಕಿ ಗಾಜನ್ನು ಬೇಧಿಸಿ ಪ್ರಯಾಣಿಕನಿಗೆ ಬಡಿದ ಪ್ರಕರಣ ಮ್ಯಾನ್ಮಾರ್ನಲ್ಲಿ ವರದಿಯಾಗಿದೆ.ಪ್ರಯಾಣಿಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮ್ಯಾನ್ಮಾರ್ ನ್ಯಾಷನಲ್ ಏರ್ಲೈನ್ಸ್ನ ವಿಮಾನ ಲೊಯ್ಕ್ವ್ ನಗರದ ವಿಮಾನ ನಿಲ್ದಾಣ ಸಮೀಪಿಸುತ್ತಿದ್ದಾಗ ನೆಲದಿಂದ ಸಿಡಿಸಿದ ಗುಂಡು ವಿಮಾನದ ಕಿಟಕಿಯ ಮೂಲಕ ತೂರಿಬಂದು ಪ್ರಯಾಣಿಕನ ಮುಖದ ಬಲಭಾಗಕ್ಕೆ ಅಪ್ಪಳಿಸಿದ್ದು ಆತ ಗಾಯಗೊಂಡಿದ್ದಾನೆ. ಆ ಸಂದರ್ಭ ವಿಮಾನ ನೆಲದಿಂದ ಸುಮಾರು 3000 ಅಡಿ ಮೇಲಿತ್ತು.
ನಿಲ್ದಾಣದಲ್ಲಿ ಲ್ಯಾಂಡ್ ಆದ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ಆಡಳಿತದ ವಿರುದ್ಧ ಹೋರಾಡುತ್ತಿರುವ ಗುಂಪುಗಳು ವಿಮಾನವನ್ನು ಗುರಿಯಾಗಿಸಿ ಗುಂಡು ಹಾರಿಸಿವೆ ಎಂದು ಸೇನಾಡಳಿತ ಆರೋಪಿಸಿದೆ.
A bullet penetrated into the cabin of a Myanmar National Airlines ATR-72 while it was landing at Loikaw Airport in Myanmar.
— AbdulWali Bughio (@AbdulWaliBughio) October 2, 2022
#Passenger #injured #MyanmarNationalAirlines #ATR72 #gunfire #landing #LoikawAirport #Myanmar #unrest#PakvsEng2022 pic.twitter.com/DNdT5DTJf9