ಮಾಜಿ WWE ಕುಸ್ತಿಪಟು ಸಾರಾ ಲೀ ನಿಧನ
ಸಾರಾ ಲೀ ( Photo: Twitter)
ವಾಶಿಂಗ್ಟನ್: ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್ (WWE) ಮಾಜಿ ಕುಸ್ತಿಪಟು ಸಾರಾ ಲೀ ನಿಧನರಾಗಿದ್ದಾರೆ. ಕೇವಲ 30 ವರ್ಷ ಪ್ರಾಯದ ಸಾರಾ ಸಾವಿನ ಸುದ್ದಿಯನ್ನು ಆಕೆಯ ತಾಯಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.
ಸಾರಾ ಅವರ ತಾಯಿ ತಮ್ಮ ಪೋಸ್ಟ್ನಲ್ಲಿ ಸಾವಿನ ಬಗ್ಗೆ ಮಾತ್ರ ತಿಳಿಸಿದ್ದಾರೆ. ಹಾಗಾಗಿ ಸಾವಿಗೆ ಕಾರಣವೇನು ಎಂದು ಇನ್ನೂ ತಿಳಿದಿಲ್ಲ. ಸಾರಾ ಲೀ ಅವರ ಸಾವಿನ ಸುದ್ದಿ ಕೇಳಿದ ಬಳಿಕ WWE ಸೇರಿದಂತೆ ಅಲೆಕ್ಸಾ ಬ್ಲಿಸ್, ಬೆಕಿ ಲಿಂಚ್, ಮಿಕ್ ಫೋಲಿ ಮುಂತಾದ ಅನೇಕ ತಾರೆಯರು ಸಾಮಾಜಿಕ ಮಾಧ್ಯಮಗಳ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ.
2016 ರಲ್ಲಿ ಸಾರಾ ಲೀ ಕೊನೆಯ ಬಾರಿ ವ್ರೆಸ್ಲಿಂಗ್ ಮಾಡಿದ್ದರು.
Next Story