ಕೊಲಂಬಿಯಾ: ಲಘು ವಿಮಾನ ದುರಂತದಲ್ಲಿ ಎಂಟು ಮಂದಿ ಮೃತ್ಯು
ಬೊಗೊಟಾ: ಕೊಲಂಬಿಯಾದ ಎರಡನೇ ಅತಿದೊಡ್ಡ ನಗರವಾದ ಮೆಡೆಲಿನ್ನಲ್ಲಿ ಸೋಮವಾರ ಸಂಭವಿಸಿದ ಲಘು ವಿಮಾನ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ndtv.com ವರದಿ ಮಾಡಿದೆ.
ಮೆಡೆಲಿನ್ನ ವಸತಿ ಪ್ರದೇಶಕ್ಕೆ ಈ ವಿಮಾನ ಅಪ್ಪಳಿಸಿ ದುರಂತ ಸಂಭವಿಸಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಹೇಳಿದ್ದಾರೆ.
ಒಲಯಾ ಹೆರ್ರೆರಾ ವಿಮಾನ ನಿಲ್ದಾಣದಿಂದ ಈ ವಿಮಾನ ಟೇಕಾಫ್ ಆಗಿತ್ತು. ಮನೆಯೊಂದಕ್ಕೆ ಅಪ್ಪಳಿಸುವ ಮುನ್ನ ವಿಮಾನದ ಎಂಜಿನ್ ವೈಫಲ್ಯದ ಸಮಸ್ಯೆ ಬಗ್ಗೆ ಪೈಲಟ್ ವರದಿ ಮಾಡಿದ್ದ. ಮನೆಗೆ ಅಪ್ಪಳಿಸುತ್ತಿದ್ದಂತೆಯೇ ಕಪ್ಪು ಹೊಗೆ ದಟ್ಟವಾಗಿ ಇಡೀ ಪ್ರದೇಶದಲ್ಲಿ ಹರಡಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆಯಲ್ಲಿ ಆರು ಮಂದಿ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವಿಮಾನ ನಿಲ್ದಾಣದ ಟ್ವಿಟ್ಟರ್ ಖಾತೆ ಟ್ವೀಟ್ ಮಾಡಿದೆ. ಮನೆಯಲ್ಲಿದ್ದವರಿಗೆ ಗಾಯಗಳಾಗಿವೆಯೇ ಅಥವಾ ಯಾರಾದರೂ ಮೃತಪಟ್ಟಿದ್ದಾರೆಯೇ ಎನ್ನುವುದು ಇನ್ನೂ ತಿಳಿದುಬಂದಿಲ್ಲ.
ಬೆಲೆನ್ ರೊಸಾಲೆಸ್ ಸೆಕ್ಟರ್ನಲ್ಲಿ ವಿಮಾನ ಅಪಘಾತವಾಗಿದೆ. ಸಂತ್ರಸ್ತರಿಗೆ ನೆರವಾಗಲು ಸರ್ಕಾರದ ಸಂಪೂರ್ಣ ಸಾಮರ್ಥ್ಯವನ್ನು ಸಕ್ರಿಯಗೊಳಿಸಲಾಗಿದೆ ಎಂದು ಮೇಯರ್ ಡೇನಿಯಲ್ ಕ್ವಿಂಟೆರೊ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ.
(11:30 a. m.) Las ocho personas que iban en la aeronave (seis pasajeros y dos tripulantes) fueron reportadas por @DAGRDMedellin como víctimas mortales. La emergencia se sigue atendiendo. #EnDesarrollo
— Aeropuerto Olaya Herrera, Medellín (@AeropuertoEOH) November 21, 2022
Se ha presentado el accidente de una avioneta en el sector de Belen Rosales. Todas las capacidades de la administración se han activado para socorrer a las Victimas. pic.twitter.com/Vj5qaJBc8T
— Daniel Quintero Calle (@QuinteroCalle) November 21, 2022