ಸಾಮೂಹಿಕ ಹತ್ಯೆ ಅಪಾಯದ ದೇಶಗಳಲ್ಲಿ ಪಾಕ್ಗೆ ಅಗ್ರಸ್ಥಾನ
ಇಸ್ಲಮಾಬಾದ್, ಡಿ.3: ಸಾಮೂಹಿಕ ಹತ್ಯೆಯ ಅತ್ಯಧಿಕ ಅಪಾಯವಿರುವ ದೇಶಗಳ ಪಟ್ಟಿಯಲ್ಲಿ ಸತತ 3ನೇ ಬಾರಿಗೆ ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ ಎಂದು ಅಮೆರಿಕದ ಚಿಂತಕರ ವೇದಿಕೆ `ಅರ್ಲಿ ವಾರ್ನಿಂಗ್ ಪ್ರೊಜೆಕ್ಟ್' (``Early Warning Project'')ವರದಿ ಮಾಡಿದೆ.
ತೆಹ್ರೀಕೆ ತಾಲಿಬಾನ್ನಿಂದ ಹೆಚ್ಚಿರುವ ಹಿಂಸಾಚಾರ ಸೇರಿದಂತೆ ಪಾಕಿಸ್ತಾನವು ಅನೇಕ ಭದ್ರತೆ ಮತ್ತು ಮಾನವ ಹಕ್ಕುಗಳ ಸವಾಲನ್ನು ಎದುರಿಸುತ್ತಿದೆ ಎಂದು 28 ಪುಟಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮ್ಯಾನ್ಮಾರ್ 2ನೇ ಸ್ಥಾನ ಮತ್ತು ಯೆಮನ್ 3ನೇ ಸ್ಥಾನದಲ್ಲಿದೆ.
Next Story