ಪಾಕಿಸ್ತಾನ : ಪಕ್ಷ ದ ಅಧ್ಯಕ್ಷತೆಯಿಂದ ಇಮ್ರಾನ್ ವಜಾಗೊಳಿಸುವ ಪ್ರಕ್ರಿಯೆಗೆ ಚಾಲನೆ
ಇಸ್ಲಮಾಬಾದ್, ಡಿ.6: `ತೋಷಖಾನಾ' ಪ್ರಕರಣದಲ್ಲಿ ಅನರ್ಹಗೊಂಡಿರುವ ಇಮ್ರಾನ್ಖಾನ್(Imran Khan)ರನ್ನು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸುವ ಪ್ರಕ್ರಿಯೆಗೆ ಪಾಕ್ ಚುನಾವಣಾ ಆಯೋಗ ಚಾಲನೆ ನೀಡಿದೆ.
ಈ ಬಗ್ಗೆ ಇಮ್ರಾನ್ಗೆ ನೋಟಿಸ್ ನೀಡಲಾಗಿದ್ದು ಡಿಸೆಂಬರ್ 13ಕ್ಕೆ ವಿಚಾರಣೆ ನಿಗದಿಯಾಗಿದೆ ಎಂದು ಆಯೋಗದ ಅಧಿಕಾರಿಗಳನ್ನು ಉಲ್ಲೇಖಿಸಿ `ದಿ ಡಾನ್' ಪತ್ರಿಕೆ ವರದಿ ಮಾಡಿದೆ. ಪ್ರಧಾನಿಯಾಗಿದ್ದ ವಿದೇಶಿ ಗಣ್ಯರು ಹಾಗೂ ಅತಿಥಿಗಳಿಂದ ಪಡೆದಿದ್ದ ದುಬಾರಿ ಉಡುಗೊರೆಗಳನ್ನು ಸರಕಾರದ ಖಜಾನೆ `ತೋಷಖಾನಾ'(``Toshkhana)ದಿಂದ ರಿಯಾಯ್ತಿ ದರಕ್ಕೆ ಖರೀದಿಸಿ, ಅವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ಪ್ರಕರಣದಲ್ಲಿ ಇಮ್ರಾನ್ಖಾನ್ ದೋಷಿ ಎಂದು ತೀರ್ಪಿತ್ತಿದ್ದ ಚುನಾವಣಾ ಆಯೋಗ ಅವರನ್ನು ಅನರ್ಹಗೊಳಿಸಿತ್ತು.
Next Story