ಪಾಕಿಸ್ತಾನ: ಭೀಕರ ಅಗ್ನಿದುರಂತ 300 ಅಂಗಡಿಗಳು ಸುಟ್ಟು ಭಸ್ಮ
ಇಸ್ಲಮಾಬಾದ್, ಡಿ.8: ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್ನಲ್ಲಿರುವ ಪ್ರಸಿದ್ಧ ಸಂಡೇ ಬಝಾರ್ನಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಸುಮಾರು 300 ಅಂಗಡಿಗಳು ಸುಟ್ಟುಹೋಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೆಕೆಂಡ್ಹ್ಯಾಂಡ್ ಬಟ್ಟೆಗಳು ಹಾಗೂ ಕಂಬಳಿಗಳನ್ನು ಮಾರಾಟ ಮಾಡುವಮಾರುಕಟ್ಟೆಯ ಗೇಟ್ ಸಂಖ್ಯೆ 7ರ ಬಳಿ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಮಾತ್ರದಲ್ಲಿ ಸಂಪೂರ್ಣ ಮಾರುಕಟ್ಟೆಗೆ ಹರಡಿದೆ. ಪಾಕ್ ವಾಯುಪಡೆಯ 2 ಹೆಲಿಕಾಪ್ಟರ್ಗಳ ನೆರವಿನಿಂದ 10 ಅಗ್ನಿಶಾಮಕ ಯಂತ್ರಗಳು ಹಲವು ಗಂಟೆಯ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಂದಿಸಲು ಯಶಸ್ವಿಯಾಗಿವೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
A massive fire broke out at a market in #Islamabad, #Pakistan Wednesday night. Casualties unknown. pic.twitter.com/e9RYYX47UG
— Media Warrior (@MediaWarriorY) December 7, 2022
Next Story