ಇರಾನ್: ಪ್ರತಿಭಟನೆಯಲ್ಲಿ ಬಂಧಿಸಲ್ಪಟ್ಟ ವ್ಯಕ್ತಿಗೆ ಗಲ್ಲುಶಿಕ್ಷೆ; ವರದಿ
ಟೆಹ್ರಾನ್, ಡಿ.8: ಇರಾನ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭ ಬಂಧಿಸಲ್ಪಟ್ಟಿದ್ದ ವ್ಯಕ್ತಿಯನ್ನು ಗುರುವಾರ ಗಲ್ಲಿಗೇರಿಸಲಾಗಿದೆ ಎಂದು ವರದಿಯಾಗಿದೆ.ಸೆಪ್ಟಂಬರ್ 25ರಂದು ಪ್ರತಿಭಟನೆಯ ಸಂದರ್ಭ ಟೆಹ್ರಾನ್ನ ಸತ್ತರ್ಖಾನ್ ರಸ್ತೆಯಲ್ಲಿ ತಡೆಯೊಡ್ಡಿರುವ ಹಾಗೂ ಭದ್ರತಾ ಸಿಬಂದಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಪ್ರಕರಣದಲ್ಲಿ ಮೊಹ್ಸಿನ್ ಶೆಕಾರಿ ಎಂಬ ವ್ಯಕ್ತಿಯನ್ನು ಗಲ್ಲಿಗೇರಿಸಲಾಗಿದೆ. ಪ್ರತಿಭಟನೆಗೆ ಸಂಬಂಧಿಸಿ ಜಾರಿಯಾದ ಪ್ರಪ್ರಥಮ ಮರಣದಂಡನೆ ಶಿಕ್ಷೆ ಇದಾಗಿದೆ ಎಂದು ನ್ಯಾಯಾಂಗ ಇಲಾಖೆಯ ‘ಮಿಝಾನ್’ ವೆಬ್ಸೈಟ್ ಉಲ್ಲೇಖಿಸಿದೆ.
ಇರಾನ್ ಆಡಳಿತದ ಕ್ರಮವನ್ನು ಜಾಗತಿಕ ಸಮುದಾಯ ಉಗ್ರವಾಗಿ ಖಂಡಿಸಬೇಕು.ಮೊಹ್ಸಿನ್ರನ್ನು ಗಲ್ಲಿಗೇರಿಸಿರುವುದನ್ನು ಖಂಡಿಸದಿದ್ದರೆ ಎಲ್ಲಾ ಪ್ರತಿಭಟನಾಕಾರರನ್ನೂ ಇರಾನ್ ಗಲ್ಲಿಗೇರಿಸಬಹುದು’ ಎಂದು ನಾರ್ವೆ ಮೂಲದ ಇರಾನ್ ಮಾನವ ಹಕ್ಕು ಸಂಘಟನೆ ಹೇಳಿದೆ.
Next Story