ಚೀನಾ ನಮ್ಮ ಏಕೈಕ ಪ್ರತಿಸ್ಪರ್ಧಿ: ಅಮೆರಿಕ
ವಾಷಿಂಗ್ಟನ್, ಡಿ.23: ಸ್ವತಂತ್ರ ಮತ್ತು ಮುಕ್ತ ಅಂತರಾಷ್ಟ್ರೀಯ ವ್ಯವಸ್ಥೆಗೆ ರಶ್ಯಾ(Russia) ತಕ್ಷಣದ ಬೆದರಿಕೆ ಒಡ್ಡುತ್ತಿದೆ ಮತ್ತು ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಮರು ರೂಪಿಸುವ ನಮ್ಮ ಆಶಯಕ್ಕೆ ಚೀನಾ(China) ಏಕೈಕ ಪ್ರತಿಸ್ಪರ್ಧಿಯಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್(Anthony Blinken) ಹೇಳಿದ್ದಾರೆ.
ಗುರುವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜತಾಂತ್ರಿಕತೆಯು ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸುವ ಏಕೈಕ ಖಚಿತ ಮಾರ್ಗವಾಗಿದೆ ಎಂದರು.
ತೈವಾನ್ ಜಲಸಂಧಿಯಾದ್ಯಂತ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಅಮೆರಿಕದ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಚೀನಾದ ಕ್ಸಿನ್ಜಿಯಾಂಗ್ ಮತ್ತು ಟಿಬೆಟ್ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ವಾಕ್ ಮತ್ತು ಪತ್ರಿಕಾ ಸ್ವಾತಂತ್ರ್ಯದ ನಿರಂತರ ಕುಸಿತ ತೀವ್ರ ಕಳವಳಕಾರಿ ಎಂದು ಹೇಳಿದ್ದಾರೆ.
Next Story