ಜಪಾನ್ನಲ್ಲಿ ಭೂಕಂಪ: ಸುನಾಮಿ ಬೆದರಿಕೆಯಿಲ್ಲ
ಟೋಕಿಯೊ, ಆ. 20: ಜಪಾನ್ನಲ್ಲಿ ಸತತ ಎರಡನೆ ದಿನವಾದ ಶನಿವಾರ ಪ್ರಬಲ ಭೂಕಂಪ ಸಂಭವಿಸಿದೆ. ಆದಾಗ್ಯೂ, ಭೂಕಂಪದಲ್ಲಿ ಪ್ರಾಣ ಹಾನಿ ಮತ್ತು ಸೊತ್ತುಗಳಿಗೆ ಹಾನಿ ಸಂಭವಿಸಿದ ವರದಿಗಳು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಿಕ್ಟರ್ ಮಾಪಕದಲ್ಲಿ 6ರ ತೀವ್ರತೆ ಹೊಂದಿದ್ದ ಭೂಕಂಪ ಉತ್ತರ ಜಪಾನ್ನ ಕರಾವಳಿಯ ಸಮುದ್ರದಲ್ಲಿ ಮಿಯಾಕೊ ನಗರದಿಂದ 167 ಕಿ.ಮೀ. ದೂರದಲ್ಲಿ ಸಂಭವಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ತಿಳಿಸಿದೆ. ಸಮುದ್ರ ತಳದಿಂದ 10 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದ ಹೊರತಾಗಿಯೂ, ಸುನಾಮಿ ಬೆದರಿಕೆ ಎದುರಾಗಿಲ್ಲ.
Next Story